ಯಾತ್ರೆಯಲ್ಲಿದ್ದ ಇಬ್ಬರು ಸನ್ಯಾಸಿಗಳು ನದಿ ದಡದ ಬಳಿ ಬಂದರು. ಅವರು ಆಭರಣಗಳನ್ನು ಧರಿಸಿದ ಓರ್ವ ಯುವತಿಯನ್ನು ಕಂಡರು. ಆಕೆ ನದಿ ದಾಟಲಾಗದೆ ಕಷ್ಟ ಪಡುತ್ತಿದ್ದಳು.
ಇದನ್ನು ನೋಡಿದ ಒಬ್ಬ ಸನ್ಯಾಸಿ ಏನೂ ಗದ್ದಲ ಮಾಡದೆ ಆಕೆಯನ್ನು ಎತ್ತಿ ನದಿ ದಾಟಿದರು.ನಂತರ ಸನ್ಯಾಸಿಗಳು ಯಾತ್ರೆ ಮುಂದುವರಿಸಿದರು. ಆಗ ಇನ್ನೊಬ್ಬ ಸನ್ಯಾಸಿ ದೂರಲು ತೊಡಗಿದರು,” ನೀನು ಒಬ್ಬ ಹೆಂಗಸನ್ನು ಮುಟ್ಟಿದ್ದು ಸರಿಯಲ್ಲ. ನಾವು ಹೆಂಗಸರ ಸಮೀಪ ಹೋಗಬಾರದೆಂಬ ಆದೇಶಕ್ಕೆ ಇದು ವಿರುದ್ಧವಾಗಿದೆ. ನೀನು ಸನ್ಯಾಸಿಗಳ ಆಚಾರಗಳಿಗೆ ವಿರುದ್ಧ ಹೇಗೆ ಹೋಗಲು ಸಾಧ್ಯ? ಎಂದು ತಕರಾರು ಎತ್ತಿದರು.

ಹೀಗೆ ಸನ್ಯಾಸಿ ನಿರಂತರ ದೂಷಿಸಿದರು. ಆದರೆ ಯುವತಿಯನ್ನು ಹೊತ್ತು ನಡೆದಿದ್ದ ಸನ್ಯಾಸಿ ಮೌನವಾಗಿ ಕೇಳುತ್ತಿದ್ದರು. ಕೊನೆಗೆ ಹೀಗೆ ಉತ್ತರಿಸಿದರು!

1. ಸನ್ಯಾಸಿಯ ಉತ್ತರವೇನಾಗಿತ್ತು?
2. ಈ ಕಥೆಯ ಇಂಗಿತವೇನು?

ನೀವೇ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ ಬಳಿಕವೇ ಉತ್ತರವನ್ನು ನೋಡಿ

ಉತ್ತರ:
1. “ನಾನು ಆಕೆಯನ್ನು ನದಿ ದಡದಲ್ಲಿ ಬಿಟ್ಟೆ. ಆದರೆ ನೀನೇಕೆ ಅವಳನ್ನು ಇನ್ನೂ ಹೊತ್ತು ಕೊಂಡಿರುವೆ”
2. ಪರಿಶುದ್ಧ ಮನಸ್ಸಿನಿಂದ ಮಾಡಿದ ಯಾವುದೇ ಕಾರ್ಯ ಪಾಪವಲ್ಲ.

ಕೃಪೆ: ಜಿ. ಫ್ರಾನ್ಸಿಸ್ ಝೇವಿಯರ್ ರವರ THE WORLD’S BEST INSPIRING STORIES ಕೃತಿಯಿಂದ

Leave a Reply