ಒಂದು ಮರದಲ್ಲಿ ನಮಗೆ ಉತ್ತಮವಾದ ಫಲ ಸಿಗಬೇಕಾದರೆ ನಾವು ಏನು ಮಾಡಬೇಕೆಂದರೆ ಸಣ್ಣ ಸಸಿಯಿಂದಲೇ ಅದಕ್ಕೆ ಒಳ್ಳೆಯ ಗೊಬ್ಬರ ನೀರುಣಿಸಬೇಕು. ಅಂತೆಯೇ ನಮ್ಮ ಮಕ್ಕಳು ಉತ್ತಮರಾಗ ಬೇಕಾದರೆ ನಾವು ಅವರಿಗೆ ಸಣ್ಣ ವಯಸ್ಸಿನಲ್ಲಿಯೆ ಪ್ರೀತಿ, ಮಮತೆ, ಕರುಣೆ ಮತ್ತು ವಿನಯತೆ ಎಂಬ ಮಾನವೀಯ ಗುಣಗಳನ್ನು ಪೂರೈಸಿ ಪೀತಿಯಿಂದ ಬಂಧಿಸಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು.

ಕಡು ಬಡತನದ ಹಾಗು ಶೀಮಂತ ಕುಟುಂಬದ ಹಿನ್ನೆಲೆಯಿಂದ ಬಂದ ಮಕ್ಕಳು ಸೃಜನಶೀಲರು, ಶ್ರಮ ಜೀವಿಗಳು, ಪ್ರವೀಣರು ಹಾಗು ಸದ್ಗುಣಿಗಳು ಆಗಿರುತ್ತಾರೆ. ಆದರೆ ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಕೆಲ ಮಕ್ಕಳು ಅಲೆಮಾರಿಗಳು, ಬುದ್ದಿಹೀನರು ಹಾಗು ಅಶಿಸ್ತಿನವರಾಗಿರುತ್ತಾರೆ. ಇದಕ್ಕೆ ಮೂಲ ಕಾರಣ ಯಾರು ಗೊತ್ತಾ? ಅವರ ತಂದೆ ತಾಯಂದಿರು. ಯಾಕೆಂದರೆ ಬಡವರು ಮಕ್ಕಳಿಗೆ ತಮ್ಮ ಕಷ್ಟದ ಅರಿವು ಮೂಡಿಸಿ ಈ ಕಷ್ಟ ನಿಮಗೆ ಬರಬಾರದು. ನೀವು ನಿಮ್ಮ ಕಾಲ ಮೇಲೆ ನಿಂತು ಒಳ್ಳೆಯವರಾಗಬೇಕು. ಹಾಗೆ ನಿಮ್ಮ ಹಾಗೆ ಕಷ್ಟ ಪಡುತಿರುವವರಿಗೆ ನೀವು ಸಹಾಯ ಮಾಡಬೇಕು ಎಂದು ಕಲಿಸಿಕೊಡುತ್ತಾರೆ. ಹಾಗೆಯೇ ಶ್ರೀಮಂತರಂತು ವಿದ್ಯಾವಂತರು, ಶಿಸ್ತುವುಳ್ಳವರು ಅವರ ಮಕ್ಕಳನ್ನು ಹಾಗೆಯೇ ಬೆಳೆಸುತ್ತಾರೆ. ಇವರಲ್ಲಿ ತಮ್ಮ ಮಕ್ಕಳ ಮೇಲೆ ಇರುವ ಪ್ರೀತಿ, ವಾತ್ಸಲ್ಯ ಹೆಚ್ಚು.

ಆದರೆ ಮಧ್ಯಮವರ್ಗದ ಜನರಿಗೆ ತಮ್ಮ ಮಕ್ಕಳ ಮೇಲಿನ ಪ್ರೀತಿ , ವಾತ್ಸಲ್ಯಗಿಂತ ಹಣದ ಮೇಲಿನ ಗಮನ ಹೆಚ್ಚು. ದೇವರ ದಯೆಯಿಂದ ಇವರಿಗೆ ಉಣ್ಣಲು, ಉಡಲು ಹಾಗು ಜೀವಿಸಲು ಅನ್ನ, ಬಟ್ಟೆ ಹಾಗು ವಸತಿಯ ಕೊರತೆಯೇನು ಇಲ್ಲ ಆದರೆ ಹಣ ಗಳಿಸಬೇಕು ಅವರಿಗಿಂತ ನಾವು ದೊಡ್ಡವರಾಗಬೇಕೆಂಬ ಆಸೆ ಅಧಿಕವಾಗಿರುತ್ತದೆ. ಇದರ ಪರಿಣಾಮವೇ ಅವರ ಮಕ್ಕಳನ್ನು ಬೀದಿ ಪಾಲಾಗಿಸುವುದು.

ಇಂತವರು ತಮ್ಮ ಮಕ್ಕಳು ನಡೆಯಲು ಆರಂಭಿಸಿದ ಕೂಡಲೇ ಮನೆಗೆ ಬೀಗ ಹಾಕಿ ಪಕ್ಕದ ಮನೆಯಲ್ಲಿ ಅಥವಾ ಅಂಗನವಾಡಿಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಮಕ್ಕಳು ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲಿರುತ್ತಾರೆ? ಏನು ಮಾಡ್ತಿದ್ದಾರೆ? ಅವರ ಅವಶ್ಯಕತೆಯಾದರು ಏನು? ಇದ್ಯಾವುದರ ಕಡೆಗು ಗಮನ ಹರಿಸುವುದಿಲ್ಲ. ಅವರು ಮಕ್ಕಳಿಗೆ ಪ್ರೀತಿ ತೋರಿಸಲ್ಲ. ಹಾಗೆಯೇ ಮಕ್ಕಳಿಗೂ ಪ್ರೀತಿಯ ಬೆಲೆ ಗೊತ್ತಿರಲ್ಲ.

ಪಕ್ಕದ ಮನೆಯವರು ಎಷ್ಟು ಎಂದು ಅವರ ಮಕ್ಕಳನ್ನು ನೊಡಿಕೊಳ್ಳಲು ಸಾಧ್ಯ. ಹೇಳಿ ಅವರಿಗವರ ಮಕ್ಕಳನ್ನು ನೊಡಿಕೂಳ್ಳುವುದೇ ಹೆಚ್ಚು, ಅಷ್ಟೆ ಅಲ್ಲದೆ ಮಕ್ಕಳು ಮಕ್ಕಳ ಜೊತೆ ಸೇರದೆ ಹೋದರೆ ಜಗಳವಾಡಿಕೊಂಡು ಬೇರೆಯಾಗಿ ಒಬ್ಬಂಟಿಯಾಗಿ ಬಿಡುತ್ತಾರೆ. ಈ ಒಬ್ಬಂಟಿತನವೇ ಅವರಿಗೆ ಕರೆದುಕೊಂಡು ಹೇೂಗುವುದು ಕೆಟ್ಟ ದಾರಿಗೆ. ಮುಂದೆ ಆ ಮಕ್ಕಳೆ ದೊಡ್ಡವರಾಗಿ ಕಳ್ಳರು , ಬೀದಿ ರೌಡಿಗಳು, ಕಿಡಿಗೇಡಿಗಳು ಆಗುವುದು. ಅಂತವರು ನಿರಾಸಕ್ತರು, ಅವಿವೇಕಿಗಳು, ಬುದ್ಧಿಹೀನರು ಆಗಿರುತ್ತಾರೆ. ಈಗ ಅವರಿಗೆ ಎಷ್ಟೇ ಬುದ್ಧಿ ಹೇಳಿದರೂ ಅವರು ಸರಿ ಆಗಲ್ಲ. ಅವರ ಅಂತರಾಳದಲ್ಲಿ ಆ ಒಬ್ಬಂಟಿತನ ಆಗಾಗಲೆ ಮನೆ ಮಾಡಿರುತ್ತೆ. ಹಸಿ ವಯಸ್ಸಿದ್ದಾಗ ಅವರಿಗೆ ಬುದ್ಧಿ ಕಲಿಸಲಿಲ್ಲ ಈಗ ಕಲಿಯುವ ಸ್ಥಿತಿಯಲ್ಲಿ ಅವರ ಮಕ್ಕಳು ಇಲ್ಲ .

ಇಲ್ಲಿ ನಮಗೆ ತಿಳಿಯುತ್ತೆ ನೇೂಡಿ ಸಣ್ಣವರಿದ್ದಾಗ ಮಕ್ಕಳಿಗೆ ಬೀದಿಗೆ ಹಾಕಿದ ತಪ್ಪಿಗೆ ಮಕ್ಕಳು ದೊಡ್ಡವರಾದ ಬಳಿಕ ತಮ್ಮ ತಂದೆ ತಾಯಿಗೆ ಬೀದಿಗೆ ಹಾಕುತ್ತಾರೆ. ಯಾಕೆ ಗೊತ್ತಾ ಅವರಿಗೆ ತಂದೆ ತಾಯಿಯ ಪ್ರೀತಿ ಬೆಲೆ ತಿಳಿದಿರಲ್ಲ.

ಆದುದರಿಂದ ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಿಗಬೇಕಾದ ಆ ಪ್ರೀತಿ, ಮಮತೆ, ವಾತ್ಸಲ್ಯ ಹಾಗು ಸತ್ಕಾರವನ್ನು ನೀಡಬೇಕು. ಇದರಿಂದ ಒಂದು ಒಳ್ಳೆಯ ಕುಟುಂಬದ ನಿರ್ಮಾಣ ಆಗುತ್ತೆ ಅದರ ಜೊತೆ ಜೊತೆಗೆ ಬೆಳೆಯುತ್ತಿರುವ ಕೆಟ್ಟ ಸಮಾಜಕ್ಕೆ ಸಹ ಕಡಿವಾಣ ಹಾಕಬಹುದು.

ಲೇಖಕರು: ಆಯೀಷಾ ಬೇಗಂ ಕೊಪ್ಪ

1 COMMENT

Leave a Reply