ಕೋಳಿ ಮೊದಲೇ ಅಥವಾ ಮೊಟ್ಟೆ ಮೊದಲೇ? ಎಂಬುದು ಯಕ್ಷಪ್ರಶ್ನೆ. ಆದರೆ ಈ ಪ್ರಶ್ನೆ ಯಾರಾದರೂ ಕೇಳಿದರೆ ಉತ್ತರಕ್ಕಾಗಿ ತಡಕಾಡುತ್ತೇವೆ. ಚಿಕ್ಕ ಮಕ್ಕಳು ಕೇಳಿದರೆ ತಲೆ ಬಿಸಿಯೇ ಬೇರೆ. ಇದಕ್ಕೆ ಉತ್ತರ ಸಿಗಬೇಕು ಎಂಬುದು ಪ್ರತಿಯೊಬ್ಬರ ಬಯಕೆ.
ಇದೀಗ ವಿಜ್ಞಾನಿಗಳು ಜಗತ್ತಿಗೆ ಮೊದಲು ಕೋಳಿ ಬಂದಿದೆ ಎಂದಿದ್ದು ಮೊಟ್ಟೆ ನಂತರ ಬಂತು ಎಂಬುದು ಅವರ ವಾದ.ಕೋಳಿಗಳ ಅಂಡಾಶಯದಲ್ಲಿ ಕಂಡುಬರುವ ಪ್ರೊಟೀನ್ ಮೊಟ್ಟೆಗಳ ರಚನೆಗೆ ಅಗತ್ಯವಾಗಿದೆ ಆದ್ದರಿಂದ ಕೋಳಿ ಮೊದಲಿಗೆ ಬಂದಿರಬೇಕು ಎಂದು ಬ್ರಿಟಿಷ್ ಸಂಶೋಧಕರು ಹೇಳಿದ್ದಾರೆ. ಇಂಗ್ಲೆಂಡ್ ಶೆಫೀಲ್ಡ್ ಮತ್ತು ವಾರ್ವಿಕ್ ಯುನಿವರ್ಸಿಟಿಯ ಸಂಶೋಧಕರು ಅಧ್ಯಯನದ ಮೂಲಕ ಈ ತತ್ವವವನ್ನು ಕಂಡು ಹಿಡಿದಿದ್ದಾರೆ. ಮೊಟ್ಟೆಯ ಸಿಪ್ಪೆಯಲ್ಲಿ ಒಂದು ಖಾಸಾ ಪ್ರೊಟೀನಿದೆ. ಅದು ಕೋಳಿಯ ಅಂಡಾಶಯದಿಂದ ಹೊರಬರುತ್ತದೆ. ಆದ್ದರಿಂದ ಮೊದಲು ಕೋಳಿಯೇ ಬಂತು ಎನ್ನುತ್ತಾರೆ. ಇದು ಅವರು ನೀಡುವ ಪುರಾವೆ.

ವೊಕ್ಲೆಡಿಡಿನ್-17(ಒಸಿ-17) ಹೆಸರಿನ ಪ್ರೊಟೀನ್ ಮೊಟ್ಟೆ ರೂಪುಗೊಳ್ಳುವುದಕ್ಕೆ ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಾರ್ಬೊನೆಟ್ ಜೊತೆ ಒಸಿ-17 ಸೇರಿಕೊಳ್ಳುತ್ತದೆ. ಕೋಳಿ ಹೇಗೆ ಹುಟ್ಟಿತು ಎಂಬ ಪ್ರಶ್ನೆಗೆ, ಮೊಟ್ಟೆ ಇಡುವ ಕೆಲವು ಜಾತಿಯ ಪಕ್ಷಿಗಳು ಕೋಳಿಗೆ ಜನ್ಮನೀಡಿತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಂಶೋಧನೆಯಲ್ಲಿ ದೊಡ್ಡ ಯಶಸ್ಸು ಶೆಫೀಲ್ಡ್ ಯುನಿವರ್ಸಿಟಿ ಪ್ರೋಫೆಸರ್ ಜಾನ್ ಹಾರ್ಡಿಂಗ್ ರವರಿಗೆ ಸಿಕ್ಕಿದೆ. ಅವರು ಹೇಳುತ್ತಾರೆ “ಹೇಗೆ ಮೊಟ್ಟೆ ಆಗುತ್ತದೆ ಎಂದು ತಿಳಿದುಕೊಳ್ಳಬೇಕಿತ್ತು.ನಿಜಕ್ಕೂ ಅದೊಂದು ಅಪೂರ್ವ ಅನುಭವಾಗಿದೆ. ಇದರಿಂದ ಇನ್ನೊಂದು ರಹಸ್ಯ ಬಹಿರಂಗವಾಯಿತು. ಅದರಿಂದ ಹೊಸ ಡಿಸೈನ್‌ನ ವಸ್ತು ತಯಾರಿಸಲು ಉಪಯುಕ್ತವಾಗಲಿದೆ. ಪ್ರಾಕೃತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದರೆ ಎಲ್ಲರೀತಿಯ ಸಮಸ್ಯೆ ಕೊನೆಗೊಳ್ಳುತ್ತದೆ. ಅದರಿಂದ ನಾವು ಬಹಳಷ್ಟು ಕಲಿಯಬಹುದಾಗಿದೆ.” ಎಂದಿದ್ದಾರೆ.

Leave a Reply