Representational Image:

ವರದಕ್ಷಿಣೆ ಹೆಸರಲ್ಲಿ ಮಹಿಳೆಯರಿಗೆ ಆಗುವ ದೌರ್ಜನ್ಯದ ಅನೇಕ ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಅವುಗಳಿಗೆ ಬೇಕಾದ ಕಾನೂನನ್ನು ರಚಿಸಿದ್ದೇವೆ. ಆದರೆ ಉತ್ತರ ಪ್ರದೇಶ ಬರೇಲಿಯಲ್ಲಿ ಮಹಿಳೆಯೊಬ್ಬಳು ತನ್ನ ಗಂಡನಿಗೇ ಬೆಂಕಿ ಹಚ್ಚಿದ್ದಾಳೆ.
ಈ ಘಟನೆಯು ಸೋಮವಾರದಂದು ಸಂಭವಿಸಿದ್ದು ಸತ್ಯಾವೀರ್ ಸಿಂಗ್ ಮಲಗಿದ್ದಾಗ ಪೆಟ್ರೋಲ್ ಸುರಿದು ಆರೋಪಿ ಪತ್ನಿ ಪ್ರೇಮ್ ಸಿಂಗ್ ಬೆಂಕಿ ಕೊಟ್ಟಿರುವುದಾಗಿ , ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಣ್ಣನ ಕಡುಬಣ್ಣದಿಂದಾಗಿ ತನ್ನ ಸಹೋದರನನ್ನು ಪತ್ನಿ ಇಷ್ಟ ಪಡುತ್ತಿರಲಿಲ್ಲ ಎಂದು ಇಷ್ಟಪಡಲಿಲ್ಲ ಎಂದು ಸತ್ಯಾವೀರನ ಸಹೋದರ ಹರ್ವೇರ್ ಸಿಂಗ್ ಹೇಳಿದ್ದಾರೆ.

ಎರಡು ವರ್ಷದ ಹಿಂದೆ ಇಬ್ಬರಿಗೆ ಮದುವೆಯಾಗಿದ್ದು, ಯಾವಾಗಲೂ ಈ ಬಗ್ಗೆ ಆಕೆ ದೂರುತ್ತಿದ್ದಳು, ಆದರೆ ಇಂತಹ ದೊಡ್ಡ ಹೆಜ್ಜೆ ದೊಡ್ಡ ಅನಾಹುತ ಮಾಡಬಹುದು ಎಂದು ನಾವು ಭಾವಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ದಂಪತಿಗೆ ಐದು ತಿಂಗಳ ಮಗಳು ಇದ್ದಾಳೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಹತ್ಯಾ ಯತ್ನ ) ಅಡಿಯಲ್ಲಿ ಎಫ್ಐಆರ್ ನೋಂದಾಯಿಸಲಾಗಿದ್ದು ಆದರೆ, ಅದನ್ನು ಮರಣದ 302 (ಕೊಲೆ) ವಿಭಾಗಕ್ಕೆ ಪರಿವರ್ತಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಸೆಹ್ದೇವ್ ಸಿಂಗ್ ಹೇಳಿದ್ದಾರೆ

Leave a Reply