ಮಹಿಳೆಯರಿಗೆ ಕೊನೆಗೂ ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಂಟ್ರಿ ಸಿಕ್ಕಿದೆ. ಈ ತೀರ್ಪಿನ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ದೇಶದ ಹಲವು ದೇಗುಲಗಳಲ್ಲಿ ಪುರುಷರಿಗೆ ಪ್ರವೇಶ ನಿಷೇಧವಿದೆ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಶಕ್ತಿ ಕಾಮಾಕ್ಯ ದೇವಸ್ಥಾನ

ಈ ದೇಗುಲಕ್ಕೆ ಪುರುಷರು ಪ್ರವೇಶಿಸಬಾರದು ಎಂಬ ನಿಯಮವಿದೆ. ಇಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶಾನುಮತಿ ಇದೆ.
ದೇಶದ ೫೧ ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಕಾಮಾಕ್ಯ ದೇವಸ್ಥಾನದಲ್ಲಿ ಆಷಾಢ ಮಾಸದ ೩ ದಿನ ಮುಚ್ಚಿರುತ್ತದೆ. ಈ ವೇಳೆ ದೇವತೆ ಋತುಮತಿಯಾಗಿರುತ್ತಾಳೆ ಎಂಬ ಪ್ರತೀತಿ ಇದೆ. ಮುಟ್ಟಾದ ಸಮಯದಲ್ಲೂ ಮಹಿಳೆಯರಿಗೆ ಪ್ರವೇಶ ಇದೆ

ಆಂಧ್ರದ ಕಾಮಾಕ್ಯ ದೇವಾಲಯ

ವಿಶಾಖ ಪಟ್ಟಣದ ಕಾಮಾಕ್ಯ ಪೀಠ ಕೂಡ ತಿಂಗಳ ನಿರ್ದಿಷ್ಟ ದಿನಗಳಲ್ಲಿ ಮಹಿಳೆಯರಿಗೆ ಪ್ರವೇಶಾನುಮತಿ ನೀಡುವುದಿಲ್ಲ. ಮಹಿಳೆಯರು ಮುಟ್ಟಾದ ಸಮಯದಲ್ಲಿ ಆ ಮನೆಯ ಪುರುಷರಿಗೆ ದೇವಾಲಯಕ್ಕೆ ಪ್ರವೇಶ ವಿಲ್ಲ ಎಂಬ ಸಂಪ್ರದಾಯವಿದೆ.

ಪುಷ್ಕರದ ಬ್ರಹ್ಮ ದೇವಾಲಯ
ರಾಜಸ್ತಾನದ ಮಧ್ಯಯುಗದ ಈ ದೇವಾಲಯ ಎಂದು ಹೆಸರುವಾಸಿಯಾಗಿರುವ ಇಲ್ಲಿ ಮದುವೆಯಾದ ಪುರುಷರಿಗೆ ಪ್ರವೇಶ ಇಲ್ಲ. ತೀವ್ರ ವ್ರತ, ಆಚರಣೆ ಹೊಂದಿರುವ ಪುರುಷರು ಮಾತ್ರ ದೇವಸ್ಥಾನ ಪ್ರವೇಶಿಸಬಹುದು. ಪುರುಷ ಭಕ್ತರು ದೇವಾಲಯದ ಸಭಾಂಗಣದ ಹೊರಗೆ ನಿಂತು ಪೂಜೆ ನಡೆಸಬಹುದು.

ಕನ್ಯಾಕುಮಾರಿ ದೇವಾಲಯ

ಕುಮಾರಿ ಅಮ್ಮನ್ ದೇವಸ್ಥಾನದಲ್ಲಿ ಭಗವತಿ ದುರ್ಗೆಯ ಗುಡಿಯಿದೆ. ದೇವಸ್ಥಾನದ ಗೇಟಿನವರೆಗೆ ಅವಿವಾಹಿತ ಪುರುಷರಿಗೆ ಮಾತ್ರ ಪ್ರವೇಶ ಇದೆ. ಒಳಾವರಣಕ್ಕೆ ವಿವಾಹಿತ ಪುರುಷರು ಹೋಗುವಂತಿಲ್ಲ.

ಮಾತಾ ದೇವಾಲಯ

ಬಿಹಾರದಲ್ಲಿರುವ ಈ ದೇವಸ್ತಾನದದಲ್ಲೂ ಪುರುಷರಿಗೆ ಪ್ರವೇಶ ನಿಷೇಧವಿದೆ. ಮಹಿಳೆಯರು ಋತುಮತಿಯಾದಾಗ ಮಹಿಳೆಯರು ಮಾತ್ರ ಪ್ರವೇಶ ಪಡೆಯಬಹುದು. ಆಗ ಪುರುಷ ಅರ್ಚರಕರಿಗೂ ಪ್ರವೇಶ ಇಲ್ಲ ಎಂಬ ಕಾರಣಕ್ಕೆ ಇದು ಹೆಸರುವಾಸಿಯಾಯಿತು.

Leave a Reply