ಬೆಳಗಾವಿ: ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯು ಜನರಲ್ ಕಂಪಾರ್ಟ್‍ಮೆಂಟಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಯೆಲ್ಲವ್ವ ಕೊಲ್ಲಾಪುರದವರು.ಯೆಲ್ಲವ್ವ ಮಯೂರ್ ಗಾಯಕ್ ವಾಡ್ ಎಂಬ 23 ವರ್ಷದ ಮಹಿಳೆ ಚಲಿಸುತ್ತಿರುವ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಹೆರಿಗೆಗೆ ರೈಲು ನಿಲ್ಲಿಸಿ ರೈಲ್ವೆ ಉದ್ಯೋಗಿಗಳು ಮತ್ತು ಪ್ರಯಾಣಿಕರು ಮಹಿಳೆಗೆ ಆವಶ್ಯಕವಾದ ಸೌಕರ್ಯಗಳನ್ನು ಕಂಪಾರ್ಟ್‍ಮೆಂಟಿನಲ್ಲಿ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಆದರೆ,ತನ್ನ ಮೂರು ಮಕ್ಕಳಲ್ಲಿ ಇಬ್ಬರನ್ನು ಈ ಮಹಾ ತಾಯಿ ರೈಲಿನಲ್ಲೇ ಹೆತ್ತಿದ್ದೊಂದು ವಿಶೇಷ. ಈ ಮಕ್ಕಳಿಗೂ ರೈಲಿಗೂ ಅವಿನಾಭಾವ ಸಂಬಂಧ ಇರುವಂತಾಗಿದೆ. ಒಂದು ವರ್ಷ ಮುಂಚೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಚಲಿಸುವ ರೈಲಿನಲ್ಲಿ ಇವರು ಗಂಡು ಮಗುವಿಗೆ ಜನ್ಮ ನೀಡಿದದರು.

ಯೆಲ್ಲವ್ವರ ಪತಿ ಕಟ್ಟಡ ನಿರ್ಮಾಣ ಕಾರ್ಮಿಕ ಆಗಿದ್ದು,ಹೆರಿಗೆಗಾಗಿರಾಯ್‍ಬಾಗ್‍ನಿಂದ ಶಾಹುಪಾರ್ಕ್‍ನಲ್ಲಿನ ಮನೆಗೆ ಸಂಬಂಧಿಕರೊಂದಿಗೆಹೋಗುವಾಗ ಯೆಲ್ಲವ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಿರುಪತಿ-ಕೊಲ್ಲಾಪುರ ಮುಂಬೈ ಸಿಎಸ್‍ಟಿಹರಿಪ್ರಿಯ ಎಕ್ಸ್‍ಪ್ರೆಸ್‍ನಲ್ಲಿ ಯೆಲ್ಲವ್ವ ರಿಗೆ ಈ ಬಾರಿ ಹೆರಿಗೆಯಾಗಿದೆ.

Leave a Reply