ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರಾಬಲ್ಯದ ವರ್ಷವೊಂದಿದ್ದರೆ ಅದು 2017 ಆಗಿರಬಹುದು. ಸಿನೆಮಾ ಅಥಾರಿಟಿಯಾಗಿರುವ ಐಎಮ್ಡಿಬಿನ ಟಾಪ್ 10 ಇಂಡಿಯನ್ ಸಿನೆಮಾಗಳಲ್ಲಿ 2017 ರ ಪಟ್ಟಿಯಲ್ಲಿ ಟಾಪ್ ಮೂರರಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳಿವೆ. ಒಟ್ಟು ಐದು ದಕ್ಷಿಣದ ಚಲನಚಿತ್ರಗಳು ಪಟ್ಟಿಯಲ್ಲಿವೆ.

ಥ್ರಿಲ್ಲರ್ ಸಿನೆಮಾ, ಮಾಧವನ್ ನಟಿಸಿರುವ “ವಿಕ್ರಮ್ ವೇದ”ವು ಬಾಲಿವುಡ್ನ ಬ್ಲಾಕ್ಬಸ್ಟರ್ಗಳನ್ನು ಸೋಲಿಸಿ ಮೊದಲ ಸ್ಥಾನ ಪಡೆದಿದೆ.
ಐಎಮ್ಡಿಬಿನ ಪಟ್ಟಿಯಲ್ಲಿ ಬಾಹುಬಲಿ 2 ಎರಡನೆಯ ಸ್ಥಾನದಲ್ಲಿದ್ದು, ತೆಲುಗು ಚಲನಚಿತ್ರೋದ್ಯಮದ ಅರ್ಜುನ್ ರೆಡ್ಡಿ ಮೂರನೇ ಸ್ಥಾನದಲ್ಲಿದೆ.
ಅಮೀರ್ ಖಾನ್ ಮತ್ತು ಝಾಯಿರಾ ವಸೀಮ್ ನಟಿಸಿದ ಸೀಕ್ರೆಟ್ ಸೂಪರ್ಸ್ಟಾರ್ ನಾಲ್ಕನೇ ಸ್ಥಾನ ಪಡೆದಿದೆ.

ಹಿಂದಿ ಮೀಡಿಯಂ, ದಿ ಘಝಿ ಅಟ್ಯಾಕ್, ಟಾಯ್ಲೆಟ್: ಏಕ್ ಪ್ರೇಮ್ ಕಥಾ, ಜಾಲಿ ಎಲ್ಎಲ್ಬಿ, ಮರ್ಸಲ್ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ಮಮ್ಮುಟ್ಟಿ ನಟಿಸಿದ ಮಲಯಾಳಂ ಸೂಪರ್ ಹಿಟ್ ಸಿನೆಮಾ ‘ದಿ ಗ್ರೇಟ್ ಫಾದರ್’ ಹತ್ತನೇ ಸ್ಥಾನ ಪಡೆದಿದೆ.

Leave a Reply