ಫಿನ್ಲೆಂಡ್ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲ್ಪಡುತ್ತದೆ. ಅಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿ ತರಬೇತಿ ನೀಡಲಾಗುತ್ತಿದೆ ಎಂಬುದನ್ನು ನೋಡಿದರೆ ಆಶ್ಚರ್ಯ ಆಗಬಹುದು. Life is a race ಎಂಬಂತೆ ಮಕ್ಕಳನ್ನು ಬೆಳೆಸುವ ಹೆತ್ತವರಿಗೆ ಬಹಳಷ್ಟು ಕಲಿಯಲು ಸಿಗಬಹುದು…

1.ಮಕ್ಕಳಿಗೆ 7 ವರ್ಷ ಆಗುವ ತನಕ ಶಾಲೆಗೆ ಸೇರಿಸುವುದಿಲ್ಲ.

2. ಮೊದಲ 6 ವರ್ಷಗಳ ಕಾಲ
ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ಜ್ಞಾನವನ್ನು ನಿರ್ಣಯಿಸು ಯಾವುದೇ ವರ್ಗೀಕರಣ ಅಥವಾ ಮಾಪನ ಇರುವುದಿಲ್ಲ.

3. ಅವರು ತಮ್ಮ ಶೈಕ್ಷಣಿಕ ವರ್ಷಗಳಲ್ಲಿ ಕೇವಲ ಒಂದು ಪರೀಕ್ಷೆಯನ್ನು ಮಾತ್ರ ತೆಗೆದುಕೊಳ್ಳುತ್ತಾರೆ.

4 ಆ ಪರೀಕ್ಷೆ ಮಕ್ಕಳು 16ನೇ ವಯಸ್ಸಿಗೆ ತಲಪಿದಾಗ ಮಾತ್ರ.

5. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳ ತರಗತಿಗಳನ್ನು ಹೊಂದಿರುತ್ತಾರೆ. ಅದು ಒಂದು ದಿನದಲ್ಲಿ 4 ಗಂಟೆಗಳು ಮಾತ್ರ. ಅಪರೂಪವಾಗಿ ಯಾವುದೇ ಹೋಮ್ವರ್ಕ್ ನೀಡಲಾಗುತ್ತದೆ.

6. ಪ್ರತಿ ತರಗತಿ ನಂತರ ವಿದ್ಯಾರ್ಥಿಗಳು 15 ನಿಮಿಷಗಳ ಕಾಲ ಬಿಡುವು, ವಿಶ್ರಾಂತಿ ಪಡೆಯುತ್ತಾರೆ.

7. ಮತ್ತು 75 ನಿಮಿಷಗಳ ಬಿಡುವು ಇರುತ್ತದೆ. ಊಟ ತಿನ್ನುವುದನ್ನು ಹೊರತು ಪಡಿಸಿ ಅವರು ತಮ್ಮಿಷ್ಟದಂತೆ ಏನು ಬೇಕಾದರೂ ಮಾಡಬಹುದು.

8. ಫಿನ್ಲೆಂಡ್ನ ಶಿಕ್ಷಣ ಕ್ಷೇತ್ರವು 100% ರಾಜ್ಯದ ಹಣದಿಂದ ನಡೆಸಲ್ಪಡುತ್ತದೆ.

9. ಶಿಕ್ಷಕರು ದಿನಕ್ಕೆ 4 ಗಂಟೆಗಳ ಕಾಲ ಮಾತ್ರ ಬೋಧಿಸುತ್ತಾರೆ.

10. ಅವರು ತಮ್ಮ ಕೆಲಸಕ್ಕೆ ಅತ್ಯುತ್ತಮ ವೇತನವನ್ನು ಪಡೆಯುತ್ತಾರೆ. ಅದು ವೈದ್ಯರು ಮತ್ತು ಇಂಜಿನಿಯರ್ಗಳಿಗಿಂತ ಕಡಿಮೆ ಇರುವುದಿಲ್ಲ.

ಕೃಪೆ: https://www.scoopwhoop.com/Things-That-India-Learn-From-Finlands-Education-System/#.xflwt5jif

Leave a Reply