ರಾಜಸ್ಥಾನದಲ್ಲಿ ಹಲವು ತಿಂಗಳ ಹಿಂದೆ ನಡೆದ ಘಟನೆ. ಬಹಳ ಸ್ವಾರಸ್ಯಕರ ಆಗಿದೆ. ಉದಯಪುರದ ನಿವಾಸಿ ಹದಿಮೂರರ ಹರೆಯದ ಹುಡುಗಿ ಹಾಗೂ ಅವಳ ಕಿರಿಯ ಸಹೋದರ ಸೇರಿ ಹತ್ತು ರೂಪಾಯಿಯ ನಾಣ್ಯ ಸಂಗ್ರಹಿಸಿ ತಂದೆಗೆ ಸ್ಕೂಟರ್ ಖರೀದಿಸಿ ದೀಪಾವಳಿ ಉಡುಗೊರೆ ನೀಡಿದ್ದು ವರದಿಯಾಗಿದೆ. ಕಳೆದೆರಡು ವರ್ಷಗಳ ಕಾಲ ಅಕ್ಕ ರುಪಾಲ್ ಹಾಗೂ ಎಂಟರ ಹರೆಯದ ತಮ್ಮ ಯಾಶಿಲ್ ಸೇರಿ ತಮಗೆ ಪಾಕೆಟ್ ಮನಿಯಾಗಿ ದೊರಕಿದ ಹತ್ತು ರೂಪಾಯಿಯ ನಾಣ್ಯವನ್ನು ಸಂಗ್ರಹಿಸಿ 62 ಸಾವಿರ ರೂಪಾಯಿ ಬೆಲೆಯ ಸ್ಕೂಟರ್ ಹೋಂಡಾ ಶೋರೂಮ್‍ನಿಂದ ಖರೀದಿಸಿ ಕೊಟ್ಟಿದ್ದರು. ಈ ನಾಣ್ಯಗಳನ್ನು ಲೆಕ್ಕ ಮಾಡಲು ಎರಡೂವರೆ ಗಂಟೆ ತಗಲಿತು.

Leave a Reply