ಪಾಟ್ನಾ: ಮುಝಾಫರ್ ನಗರದ ಅನಾಥಾಶ್ರಮದಲ್ಲಿನ 34 ಹೆಣ್ಮಕ್ಕಳು ಅತ್ಯಾಚಾರ,ಹಿಂಸೆ ದೌರ್ಜನ್ಯಕ್ಕೊಳಗಾದಂತೆ ಬಿಹಾರದ ಮತ್ತೊಂದು ಅನಾಥಾಶ್ರಮದಲ್ಲಿಯೂ ಹನ್ನೊಂದು ಹೆಣ್ಮಕ್ಕಳು ನಾಪತ್ತೆಯಾದ ವರದಿ ಚರ್ಚಿತವಾಗುತ್ತಿದೆ.

ಮುಝಾಫರ್ ನಗರದ ಪ್ರಕರಣದ ಆರೋ ಬ್ರಿಜೇಶ್ ಪಟೇಲ್ ನಡೆಸುತ್ತಿರುವ ಸ್ವಾಧರ್ ಘರ್ ಎಂಬ ಅನಾಥಾಲಯದಿಂದ ಹನ್ನೊಂದು ಹೆಣ್ಮಕ್ಕಳು ನಾಪತ್ತೆಯಾಗಿದ್ದಾರೆ. ಘಟನೆ ಅರಿತ ಕೂಡಲೇ ಅನಾಥಾಲಯದ ಮೇಲೆ ಪೋಲೀಸರು ದಾಳಿ ಮಾಡಿದಾಗ ಲೈಂಗಿಕ ಉತ್ತೇಜಕ ಔಷಧಿಗಳು, ಮದ್ಯದ ಬಾಟಲಿ ಮುಂತಾದ ಅನೇಕ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದೆ.
ಇದರ ಜೊತೆಗೆ ಕಂಪ್ಯೂಟರ್ ಮತ್ತು ಕೆಲವು ದಾಖಲೆಗಳನ್ನೂ ವಶಪಡಿಸಿದ್ದಾರೆ.

ಬ್ರಿಜೇಶ್ ಪಟೇಲ್ ಮತ್ತು ಆತನ ಸಹಾಯಕಿ ಮಧು ಕುಮಾರಿ ಎಂಬವರ ಮೆಲ್ನೋಟದಲ್ಲಿ ಈ ಅನಾಥಾಲಯ ನಡೆಸುತ್ತಿದ್ದರು. ಮಧು ಕುಮಾರಿ ನಾಪತ್ತೆಯಾಗಿದ್ದಾಳೆ.

Leave a Reply