ಕನ್ನಡನಾಡನ್ನು ಗಂಧದ ಬೀಡು ಎಂದಿದ್ದರೆ ಹಿರಿಯರು. ಕರ್ನಾಟಕ ಶ್ರೀಗಂಧಕ್ಕೆ ಪ್ರಸಿದ್ಧಿ.
ಪೂಜೆ-ಪುನಸ್ಕಾರಗಳಲ್ಲಿ ಗಂಧಕ್ಕೆ ವಿಶೇಷ ಸ್ಥಾನ. ಸೌಂದರ್ಯ ಹೆಚ್ಚಿಸು ವಲ್ಲಿಯೂ ಶ್ರೀಗಂಧದ ಪಾತ್ರ ಪ್ರಮುಖ. ಮಹಿಳೆಯರು ಮುಖಕ್ಕೆ ಹಚ್ಚುವ ಕ್ರೀಮು ಗಳಲ್ಲಿ ಶ್ರೀಗಂಧದ ಅಂಶ ಇರಲೇಬೇಕು. ಇದರಲ್ಲಿ ಇನ್ನೂ ಅನೇಕ ಉತ್ತಮ ಫಲದಾಯಕ ಗುಣಗಳೂ ಇವೆ.

1. ಶ್ರೀಗಂಧದ ಎಣ್ಣೆ ಕ್ರಿಮಿನಾಶಕ ಗುಣವನ್ನು ಹೊಂದಿದೆ.
2. ಕಫ ಹಾಗೂ ಪಿತ್ತನಾಶಕ ಗುಣವಿದೆ.
3. ರಕ್ತದೋಷಗಳನ್ನು ಪರಿಹಾರ ಮಾಡುತ್ತದೆ.
4. ಶ್ರೀಗಂಧಯುಕ್ತ ನೀರನ್ನು ಕುಡಿ ಯುವುದರಿಂದ ಆಯಾಸ ಪರಿಹಾರ ವಾಗುತ್ತದೆ ಹಾಗೂ ಬಾಯಾರಿಕೆ ನಿವಾರಣೆಯಾಗುತ್ತದೆ.
5. ಬಕ್ಕತಲೆಗೆ ಲೇಪಿಸುವುದರಿಂದ ಅಳಿದುಳಿದ ಕೂದಲುದುರುವಿಕೆ ನಿಲ್ಲುತ್ತದೆ.

6. ಇದರ ಕಷಾಯ ಉರಿಮೂತ್ರದ ಸಮಸ್ಯೆಗೆ ಉತ್ತಮ ಪರಿಹಾರ.
7. ಮೊಸರಿನಲ್ಲಿ ಶ್ರೀಗಂಧವನ್ನು ತೇಯ್ದು ಹಚ್ಚುವುದರಿಂದ ಕಜ್ಜಿ, ತುರಿ, ಸಿಬ್ಬು ಹೋಗುತ್ತದೆ.
8. ಶ್ರೀಗಂಧದ ಚಕ್ಕೆ ಹಾಕಿ ಕುದಿಸಿ ಆರಿಸಿದ ನೀರಿನಿಂದ ಸ್ನಾನ ಮಾಡುವು ದರಿಂದ ಚರ್ಮರೋಗಗಳು ನಿವಾರಣೆ ಆಗುತ್ತವೆ.
9. ಗಂಧ ತೇಯ್ದು ಅದರಲ್ಲಿ ಕರ್ಪೂರ ಸೇರಿಸಿ ಚೆನ್ನಾಗಿ ತಿಕ್ಕಿ ಹಣೆ ಮತ್ತು ಕಪಾಳಕ್ಕೆ ಹಚ್ಚಿಕೊಂಡರೆ ತಲೆನೋವು ಮಾಯವಾಗುತ್ತದೆ.
10. ಬಿರುಕು ಬಂದ ಚರ್ಮಕ್ಕೆ ತೇಯ್ದ ಶ್ರೀಗಂಧವನ್ನು ಹಸುವಿನ ಬೆಣ್ಣೆಯಲ್ಲಿ ಕಲಸಿ ಹಚ್ಚಬೇಕು.

11. ಗಂಧದ ಕೊರಡನ್ನು ಜೇನುತುಪ್ಪ ದಲ್ಲಿ ತೇಯ್ದು ನಾಲಿಗೆಯ ಮೇಲೆ ಹಚ್ಚಿ ದರೆ ನಾಯಿಕೆಮ್ಮು ನಿವಾರಣೆಯಾಗುತ್ತದೆ.
12. ಗಂಧವನ್ನು ನೆಲ್ಲಿಕಾಯಿ ರಸದಲ್ಲಿ ತೇಯ್ದು, ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ವಾಂತಿ ನಿಲ್ಲುತ್ತದೆ.
13. ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ತೇಯ್ದು ಮುಖಕ್ಕೆ ಲೇಪಿಸಿ ಕೊಳ್ಳುವುದರಿಂದ ಹಳೆಯ ಜಿಡ್ಡು ಹೋಗುತ್ತದೆ.
14. ಮೊಡವೆಗಳ ನಿವಾರಣೆಗೆ ಶ್ರೀಗಂಧ, ಅರಿಶಿನ ಕೊಂಬನ್ನು ನೀರಿನಲ್ಲಿ ತೇಯ್ದು ಗಂಧ ತಯಾರಿಸಿ ಅದನ್ನು ಹಾಲಿನ ಕೆನೆಯೊಂದಿಗೆ ತಿಕ್ಕಿ ಮುಲಾಮಿ ನಂತೆ ಮಾಡಿ ಹಚ್ಚಿಕೊಳ್ಳಬೇಕು.

ಮಂಜುಳಾ ಬಿ.

Leave a Reply