1. ನಮಗೆ ಹೊಟ್ಟೆಯವಾಯು, ಮೂತ್ರ, ಮಲವಿಸರ್ಜನೆ ಇತ್ಯಾದಿಗಳಿಗೆ ಉದ್ರೇಕವಾಗುವುದು ಸ್ವಾಭಾವಿಕ. ಅದನ್ನು ಪೂರೈಸದೆ ಕಟ್ಟಿಡುವುದರಿಂದ ಆರೋಗ್ಯಕ್ಕೆ ಹಾನಿ ಇದೆ.
  2. ನಾವು ತಿನ್ನುವ ಪದಾರ್ಥಗಳಲ್ಲಿ ತಲೆಕೂದಲು ಸೇರಿ ಕೊಳ್ಳುವ ಸಾಧ್ಯತೆ ಇದೆ. ಅದನ್ನು ತಪ್ಪಿಯೂ ನುಂಗದಿರಿ. ಯಾಕೆಂದರೆ ಅದು ಜೀರ್ಣವಾಗದೆ ಕರುಳಿನ ಮಾರ್ಗವಾಗಿ ಮಲದೊಡನೆ ವಿಸರ್ಜನೆಯಾಗುವಂತಹದು.
  3. ಜೀರ್ಣಶಕ್ತಿ ಕಡಿಮೆ ಇರುವವರು ಅನ್ನ ಅಥವಾ ಚಪಾತಿಯೊಟ್ಟಿಗೆ ಮೊಸರು ಉಪಯೋಗಿಸಿ. ಸಸ್ಯಾಹಾರ ಮತ್ತು ಮಜ್ಜಿಗೆಯ ಅಭ್ಯಾಸ ಒಳ್ಳೆಯದು.
  4. ಮುದಿಪ್ರಾಯದಲ್ಲಿ ಹೆಚ್ಚಾಗಿ ಶೌಚಾಲಯದಲ್ಲಿ ಜಾರಿ ಬಿದ್ದು ಹಾಸಿಗೆ ಹಿಡಿಯುತ್ತಾರೆ. ಪ್ರಾಯಸ್ಥರು ಇರುವಲ್ಲಿ ಶೌಚಾಲಯ ಜಾರದಂತೆ ಇಟ್ಟುಕೊಳ್ಳಿ.
  5. ಶೌಚಾಲಯ ಶುಚಿತ್ವ ಮಾಡಿ ಚೊಕ್ಕವಾಗಿಟ್ಟುಕೊಳ್ಳಿ. ಸುವಾಸನೆಗೆ ಒಡಾನಿಲ್ ಇತ್ಯಾದಿ ಉಪಯೋಗಿಸಿ. ಹೊರಗೆ ಬರುವಾಗ ಬಾಗಿಲು ಪೂರ್ತಿ ಮುಚ್ಚಬೇಡಿ. ಯಾಕೆಂದರೆ ನಂತರ ಬರು ವವರು ಒಳಗೆ ಯಾರೋ ಇದ್ದಾರೆಂದು ಕಾಯಬೇಕಾಗುತ್ತದೆ.
  6. ಶೌಚಾಲಯದಲ್ಲಿ  ಚಿಕ್ಕ ಪ್ಲಾಸ್ಟಿಕ್ ಸ್ಟೂಲ್ ಇಟ್ಟುಕೊಳ್ಳಿ. ಆದರೆ ಅದರ ಮೇಲೆ ಕುಳಿತುಕೊಳ್ಳುವಾಗ ಒದ್ದೆ ಇದೆಯೋ ನೋಡಿಕೊಳ್ಳಿ. ಇದನ್ನು ಒರೆಸಲು ಪ್ರತ್ಯೇಕ ಬಟ್ಟೆ ಇಟ್ಟುಕೊಳ್ಳಿ.
  7. ಇನ್ನೊಂದು ಬಟ್ಟೆ ಮಲ ವಿಸರ್ಜನೆಯಾದ ಬಳಿಕ ತೊಳೆದೊಡನೆ ಒರೆಸಲು ಇಟ್ಟುಕೊಳ್ಳಿ.
  8. ಮನೆಯ ಪ್ರತಿ ಬಾಗಿಲಿನ ಹಿಂಭಾಗಕ್ಕೆ ನಿಲುವು ಕೊಂಡಿ ಜೋಡಿಸಿಕೊಳ್ಳಿ (ಬಟ್ಟೆ ಇತ್ಯಾದಿ ನೇತಾಡಿಸಲು) ಶೌಚಾಲಯ ದಲ್ಲಿ ಇದು ಕಡ್ಡಾಯ.
  9. ಹಲ್ಲನ್ನು ಉಜ್ಜಲು (ಬ್ರಶ್) ವಾಶ್ ಬೇಝಿನ್ ಉಪಯೋಗಿಸಿ. ಯಾಕೆಂದರೆ ಶೌಚಾಲಯದಲ್ಲಿ ಕೂತು ಬ್ರಶ್ ಮಾಡುವಾಗ ಉಟ್ಟ ಬಟ್ಟೆಗೆ ಸಿಂಪಡಿಸಿದ ಕಲೆ ಬೀಳಬಹುದು.
  10. ಪ್ರಾಯಸ್ಥರಿಗೆ ಕೈ ಎಟಕುವಂತೆ ಸಿಗಬೇಕಾದ ವಸ್ತುಗಳು: ಚಿಕ್ಕ ಕತ್ತರಿ, ಸೂಜಿದಾರ, ವಾಲ್ ಟೇಪ್, ಸ್ಟೆಪ್ಲರ್, ಬ್ಲೇಡ್, ದಬ್ಬಣ ಇತ್ಯಾದಿ.
  11. ರಾತ್ರಿ ಮಲಗುವ ಮೊದಲು ಅಲಾರಮ್ ಗಂಟೆ ಆನ್ ಮಾಡಿ ಮಲಗಲು ಹೋದಾಗ ಪಕ್ಕದಲ್ಲಿ ಇರಬೇಕಾದ ವಸ್ತುಗಳು ಮೊಬೈಲ್, ಚಿಕ್ಕದೊಂದು ಟಾರ್ಚ್ ಇತ್ಯಾದಿ.
  12. ಇಸ್ತ್ರಿ ಪೆಟ್ಟಿಗೆ, ಹೇರ್‍ಡ್ರೈಯರ್, ಮೊಬೈಲ್ ಇತ್ಯಾದಿಯ ವಾಯರನ್ನು ಸ್ವಿಚ್‍ಗೆ ಜೋಡಿಸುವ ಮೊದಲು ಅದರ ವಾಯರ್ ಸುತ್ತಿಕೊಂಡಿದೆಯೋ ನೋಡಿ, ಅದನ್ನು ನೀಟ್ ಮಾಡಿದ ಮೇಲೆಯೇ ಜೋಡಿಸಿ ಸ್ವಿಚ್ ಆನ್ ಮಾಡಿ.
  13. ದೇಹದಿಂದ ಹೊರಗೆ ಹೋಗುವ ತ್ಯಾಜ್ಯದಲ್ಲಿ ಕಫ ಮತ್ತು ಸಿಂಬಳವೂ ಸೇರಿದೆ. ಅವು ಹೊಟ್ಟೆಗೆ ಹೋಗದಂತೆ ಜಾಗ್ರತೆ ವಹಿಸಬೇಕು.
  14. ಉಗುಳುವಾಗ ಶುದ್ಧ ಸ್ಥಳದಲ್ಲೇ ಉಗುಳಿ. (ಕಳೆದ ಸಂಚಿಕೆ ಯಲ್ಲಿ ರೋಗಶಮನ ಅಭ್ಯಾಸಗಳು- 3 (ಚಿ)ಯಲ್ಲಿ ತಪ್ಪಾಗಿ ಪಾಯಿಖಾನೆಯಲ್ಲಿ ಕಫ ಉಗುಳುವ ಬಗ್ಗೆ ಹೇಳಲಾಗಿದೆ. ಅದನ್ನು ಶೌಚಾಲಯ ಎಂದು ತಿದ್ದಿಕೊಳ್ಳಿ).
  15. ಸೀನು ಬಂದರೆ ಮೂಗಿನಿಂದಲೇ ಸೀನಿ. ಕಟ್ಟಿದ ಮೂಗನ್ನು ಬಿಡುಗಡೆಗೊಳಿಸುವ ಸ್ವಾಭಾವಿಕ ಕ್ರಿಯೆ ಅದು. ಬಾಯಿಯಿಂದ ಪ್ರಯತ್ನಿಸಿದರೆ ಅದರ ಉದ್ದೇಶ ಪೂರ್ತಿಗೊಳ್ಳುವುದಿಲ್ಲ.
  16. ಊಟ ಆದೊಡನೆ ಬಾಯಿಯನ್ನು ನೀರಿನಲ್ಲಿ ಚೆನ್ನಾಗಿ ಮುಕ್ಕಳಿಸಿ ನುಂಗಿರಿ. ಇಲ್ಲವಾದರೆ ಬಾಯೊಳಗೆ ನುಂಗದಿರುವ ಪದಾರ್ಥ ಗಳು ವಾಶ್ ಬೇಝಿನ್‍ಗೆ ಹೋಗುವ ಸಾಧ್ಯತೆ ಇದೆ.
  17. ಕತ್ತಲ ಮರೆಯಲ್ಲಿ ತಿನ್ನುವುದು ಅಥವಾ ಕುಡಿಯುವುದರಿಂದ ನೊಣ, ಕ್ರಿಮಿ ಇತ್ಯಾದಿ ಹೊಟ್ಟೆಗೆ ಹೋಗುವ ಸಾಧ್ಯತೆ ಇದೆ.
  18. ಮನೆಯ ಯಜಮಾನ ಮಲಗುವ ಮುನ್ನ ವಹಿಸಿಕೊಳ್ಳಬೇಕಾದ ಸಾಮಾನ್ಯ ಕೆಲಸಗಳು:
  19. ಕೊಳೆಯುವಂತಹ ಪದಾರ್ಥಗಳಿರುವ ಕಸದ ಬುಟ್ಟಿ/ಪೆÇಟ್ಟಣ ಸಾಧ್ಯವಾದಲ್ಲಿ ಬಿಸಾಡಿ ಬನ್ನಿ ಇಲ್ಲವೇ ಮನೆಯ ಹೊರಗೆ ಇಡಿ.
  20. ಮನೆಯ ಗೇಟು ಮತ್ತು ಹೊರ ಬಾಗಿಲಿಗೆ ಚಿಲಕ ಹಾಕಿ.
  21. ಗ್ಯಾಸ್ ಸಿಲಿಂಡೆರ್, ಗೀಝರ್, ಮೈಕ್ರೋ ಓವನ್ ಇತ್ಯಾದಿ ಆಫ್ ಮಾಡಿಕೊಳ್ಳಿ.
  22. ನೀರಿನ ನಳ್ಳಿಯಲ್ಲಿ ಸೋರಿಕೆ ಇದ್ದಲ್ಲಿ ಬಿಗಿ ಮಾಡಿ.
  23. ಮನೆಯ ಹಾಲ್‍ನ 0 ಬಲ್ಬ್ ಮಾತ್ರ ಆನ್ ಮಾಡಿ. ಇತರ ಎಲ್ಲಾ ಸ್ವಿಚ್‍ಗಳನ್ನು ಆಫ್ ಮಾಡಿ.
  24. ಸೊಳ್ಳೆಕಾಟ ಇರುವ ಮನೆಯಲ್ಲಿ ಎಲ್ಲಾ ಕಿಟಕಿಗಳಿಗೆ ಸೊಳ್ಳೆ ಜಾಲಿ ಅಂಟಿಸಿ. ಇಲ್ಲವೇ ಸೊಳ್ಳೆ ಪರದೆ ಉಪಯೋಗಿಸಿ. ಅದೂ ಸಾಧ್ಯವಾಗದಿದ್ದಲ್ಲಿ ಸೊಳ್ಳೆಯ ಬತ್ತಿಯನ್ನು ಸಂಜೆ ಯಾದೊಡನೆ ಆನ್ ಮಾಡಿ ಬೆಳಿಗ್ಗೆ ಆಫ್ ಮಾಡಿ. (ರಿಫೀಲ್ ಖಾಲಿಯಾಗಿದ್ದರೆ ಬದಲಿಸಿಕೊಳ್ಳಿ)
  25. ಬೆಳಗ್ಗೆ ಎದ್ದೊಡನೆ ಉಗುರು ಬೆಚ್ಚಗಿನ ನೀರನ್ನು ವಿರಾಮಕೊಟ್ಟು ಒಂದೆರಡು ಗ್ಲಾಸು ಕುಡಿಯುತ್ತಾ ಇರಿ. ಇಡೀ ದಿನ ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿದರೆ ಮೂತ್ರ ವಿಸರ್ಜನೆ ಚೆನ್ನಾಗಿ ಆಗಿ ರಕ್ತ ಶುದ್ಧಿ ಆಗುತ್ತದೆ.

Leave a Reply