ಸಿಂಹವನ್ನೇ ಓಡಿಸಿದ ಕಾಡೆಮ್ಮೆ

ಹೊಸದಿಲ್ಲಿ: ಕಾಡೆಮ್ಮೆಯೊಂದು ಸಿಂಹರಾಜನನ್ನೇ ಓಡಿಸಿದೆ. ಸಿಂಹದದಾಳಿಯನ್ನು ಕಾಡೆಮ್ಮೆ ಎದುರಿಸಿದ್ದಲ್ಲದೆ ಅದನ್ನು ಅಟ್ಟುವಲ್ಲಿಯೂ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕದ ಕ್ರೂಗರ್ ನ್ಯಾಶನಲ್ ಪಾರ್ಕಿನಲ್ಲಿ ಘಟನೆ ನಡೆದಿದ್ದು, ಸಿಂಹ ತನ್ನ ಆಹಾರಕ್ಕಾಗಿ ಹೊಂಚು ಹಾಕುತ್ತಿತ್ತು. ದೂರದಲ್ಲಿ ಎಮ್ಮೆಗಳ ಗುಂಪೊಂದು ಹಾದು ಬರುತ್ತಿರುವುದನ್ನು ಸಿಂಹ ನೋಡಿತ್ತು. ಸಿಂಹ ಗರ್ಜನೆ ಕೇಳಿ ಎಮ್ಮೆಗಳ ಹಿಂಡು ಚದುರಿ ಓಡತೊಡಗಿತು.
ಹೀಗೆ ಓಡುತ್ತಿದ್ದ ವೇಳೆ ಸಿಂಹ ಒಂದು ದುರ್ಬಲ ಎಮ್ಮೆಯನ್ನು ಹುಡುಕಿಕೊಂಡಿತು. ಅದನ್ನು ಬೆನ್ನಟ್ಟಿತು. ಇದೇವೇಳೆ ಎಮ್ಮೆಯೊಂದು ಸಿಂಹದೆಡೆಗೆ ಬಂದು ತನ್ನ ಕೊಂಬಿನಿಂದ ಜಾಡಿಸಿ ದೂರ ಎಸೆಯಿತು ಮತ್ತು ಅದನ್ನು ಬೆನ್ನಟ್ಟಿತು. ಈ ವೀಡಿಯೊವನ್ನು ಕ್ರೂಗರ್ ನ್ಯಾಶನಲ್ ಪಾರ್ಕಿನಲ್ಲಿ ಪ್ರವಾಸಕ್ಕೆ ಬಂದ ಯಾತ್ರಿಗಳ ತಂಡ ಚಿತ್ರೀಕರಿಸಿದೆ. ವೀಡಿಯೊ ಮಾಡಿದವರು ಹೀಗೆ ಬರೆದಿದ್ದಾರೆ.ಸಿಂಹ ತಿರುಗಿದಾಗ ಎಮ್ಮೆ ಅದನ್ನು ಬೆನ್ನಟ್ಟುತ್ತಿತ್ತು. ಎಮ್ಮೆ ಸಿಂಹವನ್ನು 328 ಅಡಿಯಷ್ಟು ದೂರ ಬೆನ್ನಟ್ಟಿದೆ ಎಂದು ತಿಳಿಸಿದ್ದಾರೆ.
hಣಣಠಿs://ತಿತಿತಿ.ಠಿuಟಿರಿಚಿbಞesಚಿಡಿi.iಟಿ/iಟಿಣeಡಿಟಿಚಿಣioಟಿಚಿಟ/ಟಿeತಿs/ತಿiಟಜ-ಚಿಟಿಜ-ಚಿmಚಿziಟಿg-ಟಿeತಿs-buಜಿಜಿಚಿಟo-ಣuಡಿಟಿs-ಣಚಿbಟes-oಟಿ-heಡಿಜ-huಟಿಣiಟಿg-ಟioಟಿess-857349

Leave a Reply