ಯೂಟ್ಯೂಬ್ ನಲ್ಲಿ ಅಧ್ಯಯನ ಮಾಡಿ ಹಳ್ಳಿಯ ಹುಡುಗಿಯೊಬ್ಬಳು ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆಗಿದ್ದು, ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದ ಕುಟುಂಬದಿಂದ ಬಂದಿರುವ ಆಕೆಯ ಸಾಧನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದು ನಮ್ಮ ಊರು: ಕೊರೋನಾ ಲಾಕ್ ಡೌನ್ ದೇಶಾದ್ಯಂತ ಸದ್ಯ ಸಡಿಲ ಗೊಳ್ಳುತ್ತಿದ್ದು, ಇದೀಗ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪ್ರಾರಂಭವಾಗಿದೆ. ವಾರಣಾಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲೂ ಪ್ರವೇಶ ಪರೀಕ್ಷೆ ಮಾಡಲಾಗಿದೆ. ಕಾಶಿ ಹಿಂದೂ ವಿಶ್ವವಿದ್ಯಾಲದ ಬಿಕಾಂ ಪ್ರವೇಶದ ಫಲಿತಾಂಶವು ಇದೀಗ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಈ ಬಾರಿ ಅರ್ಚನಾ ಸಿಂಗ್ ಪಟೇಲ್ ಅಗ್ರಸ್ಥಾನ ಪಡೆದಿದ್ದಾರೆ. ಅರ್ಚನಾ 450 ರಲ್ಲಿ 347 ಸಂಖ್ಯೆಯನ್ನು ಪಡೆದಿದ್ದಾರೆ.

ವಿಷಯ ಏನಪ್ಪಾ ಅಂದ್ರೆ! ಅರ್ಚನಾ ತಂದೆ ರಾಮ್‌ಜಿ ಸಿಂಗ್ ಪಟೇಲ್ ಹಳ್ಳಿಯಲ್ಲಿ ಹುಲ್ಲು ಕಡಿಯುವ ಕೆಲಸ ಮಾಡುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಅರ್ಚನಾ, ಯಾವುದೇ ಕೋಚಿಂಗ್ ತರಗತಿಗೆ ಹೋಗದೆ ಕೇವಲ ಯೂಟ್ಯೂಬ್ ನೋಡಿ ಅಧ್ಯಯನ ಮಾಡಿ ಬರೆದಿದ್ದಾಳೆ. ಇದರಿಂದಾಗಿ ಇಡೀ ಹಳ್ಳಿಗೆ ಹಳ್ಳಿಏ ಆಕೆಯ ಸಾಧನೆಯನ್ನು ಇದೀಗ ಕೊಂಡಾಡುತ್ತಿದೆ.

Leave a Reply