ಸೂರತ್: ಗುಜರಾತಿನ ಸೂರತ್‍ನ ಹಿಂದೂಗಳು ಬಹು ಸಂಖ್ಯಾತರಾಗಿರುವ ಮೋಟಾ ವರಾಛಾದಲ್ಲಿ ಹಿಂದೂ ವಿದ್ಯಾರ್ಥಿಗಳೇ ಅಧಿಕ ಇರುವ ಮದ್ರಸಾ ಇದೆ.

109 ವರ್ಷ ಹಳೆಯ ಈ ಮದ್ರಸಾ ಧಾರ್ಮಿಕ ಸೌಹಾರ್ದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನೆಲೆಯೂರಿದೆ. ಗುಜರಾತಿನ ದಂಗೆಯ ವೇಳೆಯೂ ಮದ್ರಸಾದಲ್ಲಿ ಕಲಿಯುವ ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿಲ್ಲ.

ಶೇ.70 ರಷ್ಟು ಹಿಂದೂ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮದ್ರಸಾ ಸ್ಕೂಲ್ ವಿಭಿನ್ನ ಧರ್ಮದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ತುಂಬಿಕೊಂಡು ಮತೀಯ ಸೌಹಾರ್ದವನ್ನು ಎತ್ತಿ ಹಿಡಿದೆ.

ಇಲ್ಲಿ ಯಾವುದೇ ಭೇದ ಭಾವವಿಲ್ಲದೆ ಕಲಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಸೂರತ್‍ನ ಈ ಮದ್ರಸಾ ಇಸ್ಲಾಮಿಯ ಹೈಸ್ಕೂಲ್ ಇಲ್ಲಿ ಸಾಂಪ್ರದಾಯಿಕ ಕಲಿಕೆಯ ಜೊತೆಗೆ ಮಾನವೀಯತೆಯ ಕುರಿತು ಕೂಡಾ ಪಾಠ ಹೇಳಿ ಕೊಡಲಾಗುತ್ತದೆ.

ಈ ವಿಡಿಯೋ ನೋಡಿ!

Leave a Reply