ಎಲ್ಲವೂ ಆಯ್ತು. ಇದೀಗ ಫೇಸ್‌ಬುಕ್‌ ತೆರೆಯಲು ಆಧಾರ್ ಕಾರ್ಡ್ ಅನಿವಾರ್ಯವಾಗಲಿದೆ. ಹೌದು ಈ ಮಾಹಿತಿಯನ್ನು ಸ್ವತಃ ಫೇಸ್‌ಬುಕ್‌ ಸಂಸ್ಥೆ ಹೇಳುತ್ತಿದೆ.

ನಕಲಿಗಳ ಖಾತೆಗಳ ಹಾವಳಿ ತಪ್ಪಿಸಲು ಮತ್ತು ಫೇಸ್​ಬುಕ್ ಬಳಸುವ ನಿಮ್ಮ ಸ್ನೇಹಿತರು ನಿಮ್ಮನ್ನು ಗುರುತಿಸಲು ಇದರಿಂದ ಅನುಕೂಲವಾಗುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಿ ಎಂದು ಸೂಚನೆಗಳಲ್ಲಿ ತಿಳಿಸುವ ಸಂಸ್ಥೆ ಮುಂದಿನ ದಿನಗಳಲ್ಲಿ ಆಧಾರ್​ ಕಾರ್ಡ್​ಸಂಖ್ಯೆ ನಮೂದಿಸುವುದನ್ನು ​​ಕಡ್ಡಾಯಗೊಳಿಸಬಹುದು ಎನ್ನಲಾಗಿದೆ.

ಜಗತ್ತಿನಾದ್ಯಂತ ಸುಮಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಒಂದು ವೇಳೆ ಆಧಾರ್​ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದರೆ ಮಾಹಿತಿ ಸೋರಿಕೆಯಾಗುವ ಇದೆ ಎಂದು ಅಂದಾಜಿಸಲಾಗಿದೆ.

Leave a Reply