ಹೊಸದಿಲ್ಲಿ: ಮೋದಿ ಸರಕಾರ ತ್ರಿವಳಿ ತಲಾಕ್ ನಂತರ ಈಗ ಮುಸ್ಲಿಮ್ ಮಹಿಳೆಯರಿಗಾಗಿ ಬಹು ವಿವಾಹ ಹಾಗೂ ನಿಕಾಹ್ ಹಲಾಲ ನಿಷೇಧಿಸಲು ತಯಾರಿ ನಡೆಸುತ್ತಿದೆ.

ಮೂಲಗಳು ತಿಳಿಸಿರುವ ಪ್ರಕಾರ ಮೋದಿ ನಿಕಾಹ್ ಹಲಾಲ ಮತ್ತು ಬಹು ವಿವಾಹವನ್ನು ಕೊನೆಗೊಳಿಸುವ ಪರವಿದ್ದಾರೆ. ನಿಕಾಹ್ ಹಲಾಲ ಮತ್ತು ಬಹು ವಿವಾಹವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರ ಸರಕಾರ ಈ ವರೆಗೆ ಯಾವುದೇ ಉತ್ತರ ನೀಡಿಲ್ಲ.

ಮೂಲಗಳು ತಿಳಿಸಿದ ಪ್ರಕಾರ ಮೋದಿ ಸರಕಾರ ಮುತಲಾಕ್ ಮಸೂದೆ ಪಾಸು ಮಾಡಿದ್ದು ಇನ್ನು ಮುಸ್ಲಿಮ್ ಮಹಿಳೆಯರಿಗಾಗಿ ನಿಕಾಹ್ ಹಲಾಲ ಮತ್ತು ಬಹು ವಿವಾಹದಂತಹ ಕೆಟ್ಟ ರೀತಿಯನ್ನು ಕೊನೆಗೊಳಿಸುವತ್ತ ಹೆಜ್ಜೆ ಇರಿಸಲಿದೆ. ಇದಕ್ಕೂ ಸರಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಲಿದೆ.

ಈ ವರೆಗೆ ಮುತ್ತಲಾಕ್ ಸಂಸತ್ತಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕಳೆದ ಅಧಿವೇಶನದಲ್ಲಿ ಮೋದಿ ಸರಕಾರ ಲೋಕ ಸಭೆಯಲ್ಲಿ ಮಸೂದೆ ಪಾಸು ಮಾಡಿತ್ತು. ಆದರೆ ರಾಜ್ಯ ಸಭೆಯಲ್ಲಿ ಬಹು ಮತದ ಕೊರತೆಯಿಂದ ಅದು ಅಲ್ಲಿ ಸಿಕ್ಕಿ ಹಾಕಿಕೊಂಡಿದೆ.

ಕಾಂಗ್ರೆಸ್ ಸಹಿತ ಹಲವು ವಿಪಕ್ಷಗಳು ಮುತ್ತಲಾಕ್ ತಿದ್ದುಪಡಿಯ ಬೇಡಿಕೆ ಮಾಡುತ್ತಿದೆ. ಆದರೆ ಮೋದಿ ಸರಕಾರ ಯಾವ ಬದಲಾವಣೆಗೂ ಈ ವರೆಗೆ ಸಿದ್ಧವಾಗಿಲ್ಲ. ಕೆಲವು ಮುಸ್ಲಿಮ್ ಸಂಘಟನೆಗಳು ಮೋದಿ ಸರಕಾರದ ಮುತ್ತಲಾಕ್ ಮಸೂದೆಯನ್ನು ವಿರೋಧಿಸುತ್ತಿವೆ.

ಮೋದಿ ಸರಕಾರ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಸಂಘಟನೆಗಳು ವಾದಿಸುತ್ತಿವೆ. ಇದಕ್ಕಿಂತ ಮೊದಲು ಸುಪ್ರೀಂಕೋರ್ಟು ಕೇಂದ್ರ ಸರಕಾರಕ್ಕೆ ಮುತ್ತಲಾಕ್ ಕುರಿತು ಕಾನೂನು ಮಾಡಲು ತಿಳಿಸಿದೆ. ಸುಪ್ರೀಂಕೋರ್ಟು ಈಗಾಗಲೇ ಮುತ್ತಲಾಕ್ ಮುಸ್ಲಿಮ್ ಮಹಿಳೆಯರ ಮೂಲಭೂತ ಹಕ್ಕು ಉಲ್ಲಂಘಿಸುತ್ತದೆ ಎಂದು ತಿಳಿಸಿದೆ.

Leave a Reply