ಡಾಕಾ: ಅಸ್ಸಾಮಿನ ರಾಷ್ಟ್ರೀಯ ಪೌರತ್ವ ಪಟ್ಟಿಯಿಂದ ಕಾಣೆಯಾದವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಾಂಗ್ಲಾ ದೇಶ ಸ್ಪಷ್ಟಪಡಿಸಿದೆ.

ಅನಧಿಕೃತವಾದ ವಲಸಿಗರು ಎಂದು ಆರೋಪಿಸಿ ಪಟ್ಟಿಯಿಂದ ಹೊರ ದಬ್ಬಿದವರಿಗೂ ನಮಗೂ ಸಂಬಂಧ ಕಲ್ಪಿಸುವ ಹೇಳಿಕೆಯು ಸುಳ್ಳಾಗಿದೆ ಎಂದು ಬಾಂಗ್ಲಾ ವಿದೇಶಾಂಗ ಮಾಹಿತಿ ತಂತ್ರಜ್ಞಾನ ಸಚಿವ ಹಸನುಲ್ ಹಕ್ ಸ್ಪಷ್ಟ ಪಡಿಸಿದ್ದಾರೆ.

ಅಸ್ಸಾಮಿನಲ್ಲಿ ವರ್ಷಾಂತರಗಳಿಂದ ಕೋಮು ಸಂಘರ್ಷ ನಡೆಯುತ್ತಿದೆಯೆಂಬುದು ಎಲ್ಲರಿಗೂ ತಿಳಿದಿದೆ. ಕಳೆದ ನಲವತ್ತೆಂಟು ವರ್ಷಗಳಲ್ಲಿ ಭಾರತ ಸರಕಾರ ಬಾಂಗ್ಲಾದಿಂದ ಅಕ್ರಮ ವಲಸಿಗರು ಪ್ರವೇಶಿಸಿದ ಕುರಿತು ಪರಾಮರ್ಶಿಸಿಲ್ಲ. ಈಗಿನ ಸಮಸ್ಯೆಯನ್ನು ನರೇಂದ್ರ ಮೋದಿ ಸರಕಾರ ಪರಿಹರಿಸಬೇಕೆಂದು ಅವರು ತಿಳಿಸಿದರು.

ನ್ಯಾಯಪೂರ್ಣವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಈ ವಿಷಯದಲ್ಲಿ ನಮಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಅವರು ಸ್ಪಷ್ಟಪಡಿಸಿದರು.

Leave a Reply