ಬೆಂಗಳೂರು: ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.

ಆಗಸ್ಟ್‌ 30ರಂದು ಬೀದಿನಾಯಿಗಳ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಎರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಸುಮಾರು 9.30 ರ ವೇಳೆಗೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಇನ್ನೊಂದು ಘಟನೆ

ಇತ್ತೀಚಿಗೆ ಹೈದರಾಬಾದ್ ನಲ್ಲಿ ನಾಯಿಯೊಂದು ದಾಳಿ ಮಾಡಿದ ಪರಿಣಾಮವಾಗಿ 5 ವರ್ಷದ ಹುಡುಗ ತೀವ್ರವಾಗಿ ಗಾಯಗೊಂಡಿದ್ದು, ಈ ಘಟನೆ ಮಂಗಳವಾರ ಮಿಯಾಪುರ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿತ್ತು. ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ.

ತನ್ನ ತಂದೆ ಮತ್ತು ಸಹೋದರನೊಂದಿಗೆ ನಡೆದು ಹೋಗುತ್ತಿದ್ದ ಹುಡುಗನ ಮೇಲೆ ಭಯಾನಕವಾಗಿ ಶ್ವಾನ ದಾಳಿ ಮಾಡಿದ್ದು ಸಿಸಿ ಟಿವಿಯಲ್ಲಿ ಗೋಚರಿಸಿದೆ. ಹುಡುಗನ ತಂದೆ ಮತ್ತು ಇನ್ನಿತರ ನೆರೆಹೊರೆಯವರು ನಾಯಿಯಿಂದ ಹುಡುಗನನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಇನ್ನೊಂದು ನಾಯಿ ದಾಳಿ ಮಾಡುತ್ತದೆ. ಸುಮಾರು 30-ಸೆಕೆಂಡ್ ಹೋರಾಟದ ನಂತರ, ಅವರು ನಾಯಿಗಳ ನಿಯಂತ್ರಣದಿಂದ ಹುಡುಗನನ್ನು ಬಿಡಿಸುತ್ತಾರೆ. ಆದರೆ ಈ ಮಧ್ಯೆ ಮಗು ಸೀರಿಯಸ್ ಆಗಿದೆ.

Leave a Reply