ಗೋರಖ್ ಪುರ: ಬಿ.ಆರ್.ಸಿ ಮೆಡಿಕಲ್ ಕಾಲೇಜಿನಲ್ಲಿ ಶಿಶುಗಳ ಮರಣದ ಆರೋಪದಲ್ಲಿ ಶಿಕ್ಷೆಗೊಳಗಾದ ಡಾ. ಕಫೀಲ್ ಖಾನ್ ಸಹೋದರ ಕಾಶಿಫ್ ಜಮಾಲ್ ವಿರುದ್ಧ ಅಪರಿಚಿತರಿಂದ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದೆ.

ಭಾನುವಾರ ರಾತ್ರಿ ಹನ್ನೊಂದು ಗಂಟೆಯ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.

ಹುಮಾಯೂನ್ ಪುರದ ಉತ್ತರದಲ್ಲಿ ಜೆಪಿ ಆಸ್ಪತ್ರೆಯ ಬಳಿ ಘಟನೆ ನಡೆದಿದ್ದು ಬೈಕ್ ನಲ್ಲಿ ಬಂದ ಅಪರಿಚಿತ ಬಂದೂಕು ಧಾರಿಗಳು ಗುಂಡು ಹಾರಿಸಿದ್ದು ಹೊಟ್ಟೆ ಬುಜ ಕಪಾಳಕ್ಕೆ ಗಾಯಗಳಾಗಿದೆ. ಆದರೆ ಘಟನೆಯ ಕುರಿತು ಯಾರೂ ಈ ವರೆಗೆ ದೂರು ಸಲ್ಲಿಸಿಲ್ಲವೆಂದು ಪೋಲೀಸರು ತಿಳಿಸಿದ್ದಾರೆ.

Leave a Reply