ಕರ್ನಾಟಕ ರಾಜ್ಯದ ಸರಕಾರಿ, ಅನುದಾನಿತ, ಖಾಸಗಿ ಮತ್ತು ಡೀಮ್ಡ್ ವಿ.ವಿ. ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ವಿವಿಧ ವೃತ್ತಿಪರ ಕೋರ್ಸ್ ಗಳ ಸರಕಾರಿ ಕೋಟಾದ ಸೀಟುಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ್ದ 2018ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಇಂದು (ಶುಕ್ರವಾರ) ಮಧ್ಯಾಹ್ನ ಗಂಟೆ 1 ಕ್ಕೆ ಪ್ರಕಟವಾಗಲಿದೆ.

ಮಧ್ಯಾಹ್ನ 3 ಗಂಟೆಯಿಂದ ಈ ಕೆಳಗಿನ ವೆಬ್ ಸೈಟ್ ಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.
www.kea.kar.nic.
www.cet.kar.nic.in
www.karresults.nic.in

ಫಲಿತಾಂಶ ಏನೇ ಬರಲಿ. ಅದನ್ನು ಖುಷಿಯಾಗಿ ಸ್ವೀಕರಿಸಿ. ಪಕ್ಕಾ ಕರಿಯರ್ ಪ್ಲಾನಿಂಗ್ ಮಾಡಿಕೊಳ್ಳಿ. ಆಕರ್ಷಣೆ ಮತ್ತು ಅವಾಸ್ತವ ಭ್ರಮೆಗಳಿಗೆ ಬಲಿಯಾಗಬೇಡಿ.

ಬದುಕಿನಲ್ಲಿ ಸಂಪಾದಿಸಬಹುದಾದ ದುಡ್ಡಿಗಿಂತ, ಸಾಧನೆ ಮಾಡಬಹುದಾದ ಕ್ಷೇತ್ರವನ್ನು ಆಯ್ಕೆ ಮಾಡಿ. ಹಣಕ್ಕಿಂತ ನೆಮ್ಮದಿಯ ಬದುಕಿಗೆ ಆಧ್ಯತೆ ನೀಡಿ. ನಿಮ್ಮ ಮೇಲೆ ಸಮಾಜ, ಸಮುದಾಯ ಮತ್ತು ಕುಟುಂಬದ ಹಲವು ನಿರೀಕ್ಷೆಗಳಿವೆ. ಅವುಗಳನ್ನ ಹುಸಿಗೊಳಿಸಬೇಡಿ. ಜವಾಬ್ದಾರಿ ಯುತ ಪ್ರಜೆಗಳಾಗಿ ಬದುಕಿ, ನಾಳೆ ನಿಮ್ಮದೇ‌.

ನಿಮಗೆ ಒಳಿತಾಗಲಿ. ಎಲ್ಲರಿಗೂ ಶುಭಾಶಯಗಳು.

ಸಿಇಟಿ/ನೀಟ್ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಮತ್ತು ಕರಿಯರ್ ಕೌನ್ಸಿಲಿಂಗ್ ಗಾಗಿ ಸಂಪರ್ಕಿಸಿರಿ‌

ಉಮರ್ ಯು.ಹೆಚ್
ಮೊ. ಸಂ. 9845054191

Leave a Reply