ಮಂಗಳೂರು : ಪ್ರಾಣಿಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ಲಕ್ಷಣ ಸುಬ್ರಮಣ್ಯ ಸಮೀಪದ ಪಂಜ ಕಲ್ಮಡ ಗ್ರಾಮದ ಮಕ್ಕಳಲ್ಲಿ ಕಂಡು ಬಂದಿದ್ದು, ಪೋಷಕರು ಆತಂಕ ಗೊಂಡಿದ್ದಾರೆ.

ಹನ್ನೊಂದು ವಯಸ್ಸಿನ ಸುಮಾರು ಆರೇಳು ಮಕ್ಕಳಲ್ಲಿ ಈ ಲಕ್ಷಣ ಗೋಚರಿಸಿದ್ದು, ಮಕ್ಕಳಿಗೆ ಜ್ವರ ಬಂದು ಬಳಿಕ ಕಾಲು ಮತ್ತು ಬಾಯಿಯಲ್ಲಿ ನೀರು ಬೊಬ್ಬೆಗಳು (ಗುಳ್ಳೆಗಳು) ಕಾಣಿಸಿಕೊಂಡಿವೆ. ಆ ಗುಳ್ಳೆಗಳು ಒಡೆದು ಕೀವು ಸೋರಿಕೆಯಾಗಿ ಮಕ್ಕಳಿಗೆ ಆಹಾರ ಸೇವಿಸಲು ಕಷ್ಟ ಆಗುತ್ತಿದೆ.

ಪೋಷಕರು ಮಕ್ಕಳನ್ನು ಸ್ಥಳೀಯ ವೈದ್ಯರಿಗೆ ತೋರಿಸಿದ್ದು, ಕೆಲವರು ಗಿಡಮೂಲಿಕೆಗಳ ಸಹಾಯ ಪಡೆದಿದ್ದರೆ. ಪುಟ್ಟ ಮಗುವಿನಿಂದ ಹಿಡಿದು ಅಂಗನವಾಡಿ ಮಕ್ಕಳ ವರೆಗೆ ಈ ಜ್ವರ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಈ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿಲ್ಲ. ಇಂತಹ ಯಾವುದೇ ಪ್ರಕರಣ ತಾಲೂಕಿನ ಇತರ ಭಾಗದಲ್ಲಿ ಪತ್ತೆಯಾಗಿಲ್ಲ. ಸಾಮಾನ್ಯವಾಗಿ ಪ್ರಾಣಿಗಳಿಗೆ ಬರುವ ಈ ರೋಗ ಮನುಷ್ಯರಿಗೆ ಬಂದಿರುವುದಕ್ಕೆ ಹವಾಮಾನ ಬದಲಾವಣೆಯೇ ಕಾರಣ ಎಂದು ತಾಲ್ಲೂಕು ವೈದ್ಯಾಧಿಕಾರಿ ಸುಬ್ರಮಣ್ಯ ಹೇಳಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ. ಪ್ರಾಣಿಗಳಿಗೆ ಬರುವ ಈ ರೋಗ ಮಾರಣಾಂತಿಕ ಅಲ್ಲ… ಆದ್ದರಿಂದ ಭಯಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

Leave a Reply