ನವದೆಹಲಿ : ನೋಟುಗಳು ಅತಿ ಹೆಚ್ಚು ಚಲಾವಣೆಯಾಗುವ ಕಾರಣದಿಂದ ಕೈಗಳಿಂದ ಕೈಗಳಿಗೆ ಚಲಾವಣೆಯಾಗುತ್ತದೆ. ಕೆಲವೊಮ್ಮೆ ಜನರು ಅದನ್ನು ಎಣಿಸಲು ಎಂಜಲುಗಳನ್ನು ತಾಗಿಸುತ್ತಾರೆ. ಇದರಿಂದ ಭಯಾನಕ ರೋಗಗಳು ಹರಡುವ ಸಾಧ್ಯತೆ ಇದೆ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಸಮಗ್ರ ಅಧ್ಯಯನ್ ನಡೆಸಬೇಂದು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಮನವಿಯನ್ನು ನೀಡಿದೆ.

ನೋಟುಗಳ ಮೂಲಕ ಹರಡುವ ವಿವಿಧ ರೋಗಗಳ ಬಗ್ಗೆ ಜಗತ್ತಿನ ವಿವಿಧೆಡೆಗಳಲ್ಲಿ ಅಧ್ಯಯನ ನಡೆದಿದ್ದು, ಸುಮಾರು 78 ವಿವಿಧ ಸೂಕ್ಷ್ಮಅಣು ಜೀವಿಗಳು ನೋಟುಗಳಲ್ಲಿ ಪತ್ತೆಯಾಗಿದೆ ಎಂದು ಭಾರತದ ಇಸ್ಟಿಟ್ಯೂಟ್ ಆಫ್ ಜಿನಾಮಿಕ್ಸ್ ಅಂಡ್ ಇಂಟಗ್ರೇಟಿವ್ ಬಯೋಲಜಿ (ಐಜಿಐಬಿ)ಯ ವರದಿಯಲ್ಲಿ ತಿಳಿಸಲಾಗಿತ್ತು.

ಯಾವೆಲ್ಲ ರೋಗಗಳು ಹರಡುತ್ತದೆ?

ಜ್ವರ, ಹೊಟ್ಟೆನೋವು, ಚರ್ಮ ರೋಗ ,
ಮೂತ್ರನಾಳದ ಸೋಂಕು, ಶ್ವಾಸಕೋಶದ ಸೋಂಕು,
ಗಂಟಲು ಸೋಂಕು, ಕ್ಷಯ, ಟಾನ್ಸಿಲೈಟ್,
ರಕ್ತ ನಂಜು ಮೆದುಳಿನ ಉರಿಯೂತ ಇತ್ಯಾದಿ

ಸೋಂಕು ಹೇಗೆ ಹರಡುತ್ತದೆ

ಮೂಗಿನಿಂದ ಸ್ರಾವಗಳು, ಸೀನು ಮತ್ತು ಕೆಮ್ಮುವಾಗಿನ ದ್ರವ, ಮಲಮೂತ್ರ ನೋಟಿಗೆ ತಾಗುವುದು.
ನೋಟಿಗೆ ಜೊಲ್ಲು ರಸ ಹಚ್ಚುವುದು
ಗಾಯಗಳಿಗೆ ತಾಗುವುದು
ಯಾವುದೇ ರೀತಿಯಲ್ಲಿ ಬ್ಯಾಕ್ಟೀರಿಯಾ ತಾಗುವುದು ಇತ್ಯಾದಿ

Leave a Reply