ಕಳೆದ ಗುಜರಾತ್ ಮತ ಎಣಿಕೆಯ ಮುಂಚಿತವಾಗಿ ಪಬ್ಲಿಕ್ ಟಿವಿ ಸಮೀಕ್ಷೆಯನ್ನು ನಡೆಸಿತ್ತು.‌ ಗುಜರಾತ್ ಫಲಿತಾಂಶದಂದು ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯಲ್ಲಿ ಅಂತರ ಬಹಳ ಇತ್ತು. ಅಡಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯಂತೆ ಸೋಲೊಪ್ಪಿಕೊಳ್ಳಲು ತಯಾರಿಲ್ಲದ ಪಬ್ಲಿಕ್ ಟಿವಿ ಗುಜರಾತ್ ಸಮೀಕ್ಷೆಯಲ್ಲಿ ನಾವೇ ನಂಬರ್ ವನ್., ಟೀರ್ಪಿ ವಿಚಾರದಲ್ಲಿ ಏರಿಕೆಯನ್ನು ಕಂಡಿದೆ ಎಂದು ಅಂಕಿಅಂಶಗಳನ್ನು ಜನರ ಮುಂದಿಟ್ಟಿತ್ತು.

ಪಬ್ಲಿಕ್ ಟಿವಿಯ ಅಂಕಿ ಅಂಶಗಳು ಟಿವಿ9 ಚಾನೆಲನ್ನು ಎರಡನೆಯ ಸ್ಥಾನಕ್ಕೆ ದೂಡಿತ್ತು. ಆದರೆ ವಾಸ್ತವದಲ್ಲಿ ಪಬ್ಲಿಕ್ ಟಿವಿಯ ಸಮೀಕ್ಷೆ ಹಾಗೂ ಅಂಕಿಅಂಶಗಳು ಆದಾಗಲೇ ವಾಸ್ತವಕ್ಕೆ ಬಹಳ ದೂರವಾಗಿದ್ದು ಅಂಕಿ ಅಂಶಗಳ ಹಾಗು ಟೀಅರ್ಪಿಯಲ್ಲಿ ಕುಸಿತ‌ ಕಂಡರೂ ಸುಳ್ಳು ಸುದ್ದಿಯನ್ನು ನಿರಂತರವಾಗಿ ಜನರ ಮುಂದಿಡುತ್ತಾ ಹೋದ ಪಬ್ಲಿಕ್ ಟಿವಿ ವಿರುದ್ಧ ಟಿವಿ9 ವ್ಯವಸ್ಥಾಪಕರು ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಆ ಬಗ್ಗೆ ವೀಡಿಯೋ ವೈರಲ್ ಆಗುತ್ತಿದೆ

Leave a Reply