ಆಧಾರ್ ಕಾರ್ಡ್ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆಯಿಂದ ಹುತಾತ್ಮ ಯೋಧನ ಪತ್ನಿ ಚಿಕಿತ್ಸೆ ಲಭಿಸದೆ ಮೃತಪಟ್ಟ ಘಟನೆ ವರದಿಯಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧ ವಿಜಯಾಂದ್ ತಾಪರ್ ಪತ್ನಿ ಮೃತಪಟ್ಟ ದುರ್ದೈವಿ.

ಹರಿಯಾಣದ ಸೋನಪತ್ತ್ ಎಂಬಲ್ಲಿ ಘಟನೆ ಸಂಭವಿಸಿದ್ದು, ತಾಯಿಯ ಪರಿಸ್ಥಿತಿ ಗಂಭೀರ ವಾಗಿತ್ತು. ಆಧಾರ್ ಕಾರ್ಡ್ ತಂದಿರಲಿಲ್ಲ‌. ಒಂದು ಗಂಟೆಯ ಬಳಿಕ ತರುತ್ತೇವೆ ಎಂದರೂ ಆಧಾರ್ ಕಾರ್ಡ್ ತೋರಿಸಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲಾಗಿತ್ತೆಂದು ಪುತ್ರ ಪವನ್ ಕುಮಾರ್ ಆರೋಪಿಸಿ ಹೋರಾಟ ನಡೆಸುತ್ತಿದ್ದಾರೆ.

Leave a Reply