ನವದೆಹಲಿ: ದೆಹಲಿಯ ಇತಿಹಾಸ ಪ್ರಸಿದ್ಧ ಅಕ್ಬರ್ ರಸ್ತೆಯನ್ನು ರಾತ್ರಿ ಬೆಳಗಾಗುವುದರೊಳಗೆ ಮಹಾರಾಣಾ ಪ್ರತಾಪ್ ರಸ್ತೆಯಾಗಿ ಬದಲಾಯಿಸುವ ಯತ್ನ ನಡೆಯಿತು. ಪುರಾತನ ಕಾಲದ ಈ ರಸ್ತೆಗೆ ಮೊಗಲ್ ಚಕ್ರವರ್ತಿ ಅಕ್ಬರ್ ಹೆಸರನ್ನಿಡಲಾಗಿತ್ತು. ಇಲ್ಲಿ ಗಣ್ಯರ ಮನೆ ಮತ್ತು ಕಾಂಗ್ರೆಸ್ ಕಚೇರಿಯೂ ಇದೆ. ಆದರೆ ಈ ರಸ್ತೆಗೆ ಅಕ್ಬರ್ ಹೆಸರನ್ನಿಟ್ಟ ಬಗ್ಗೆ ಕೆಲವರಿಗೆ ಅಸಹನೆ ಇದೆ. ಇವರು ದೆಹಲಿ ಕಾರ್ಪರೇಶನ್ ನ ಬಿಳಿ ಮತ್ತು ಹಸಿರು ಬಣ್ಣದ ಫಲಕದ ಮೇಲೆ ಹಳದಿ ಮತ್ತು ಕಾವಿ ಬಣ್ಣದಲ್ಲಿ ಮಹಾರಣಾ ಪ್ರತಾಪ್ ರಸ್ತೆ ಎಂಬ ಭೀತ್ತಿ ಪತ್ರ ಅಂಟಿಸಲಾಗಿತ್ತು.
ಪೋಲಿಸರು ಬಂದು ಅದನ್ನು ತೆರವು ಗೊಳಿಸಿದರು.

ರಾಜಸ್ತಾನದ ಪ್ರಸಿದ್ಧ ದೊರೆ ಮಹಾರಾಣಾ ಪ್ರತಾಪ್ ಜನ್ಮ ದಿನದಂದು ಈ ಫಲಕ ಪ್ರತ್ಯಕ್ಷವಾಗಿದೆ. 1576ರಲ್ಲಿ ಈತ ಅಕ್ಬರ್ ವಿರುದ್ಧ ಯುದ್ದ ಮಾಡಿದ್ದ. 2016ರಲ್ಲಿ ಈ ರಸ್ತೆಯ ಹೆಸರನ್ನು ಬದಲಿಸಿ ರಾಣಾ ಪ್ರತಾಪ್ ಹೆಸರನ್ನಿಡಲು ದೆಹಲಿ ಕಾರ್ಪರೇಶನ್ ಗೆ ಮನವಿ ಮಾಡಿದ್ದಾಗಿ ಬಿಜೆಪಿ ಹೇಳಿಕೊಂಡಿತು. ಕೇಂದ್ರ ಸಚಿವ ವಿಕೆ ಸಿಂಗ್ ಕೂಡಾ ಅಂದಿನ ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯ ನಾಯ್ಡುವಿಗೆ ಮನವಿ ಸಲ್ಲಿಸಿದ್ದರು.

Leave a Reply