“ನಾನು ಭಾರತಕ್ಕೆ ಬಂದು ಕಾನೂನನ್ನು ಎದುರಿಸಲು ಸಿದ್ಧ . ಆದರೆ ನ್ಯಾಯಾಲಯವು ನನ್ನನ್ನು ಅಪರಾಧಿ ಎಂದು ತೀರ್ಮಾನಿಸುವ ವರೆಗೆ ಸರ್ಕಾರವು ನನ್ನನ್ನು ಬಂಧಿಸಲ್ಲ ಎಂಬ ಶರತ್ತಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ನಾನು ದೇಶಕ್ಕೆ ಮರಳುತ್ತೇನೆ” ಎಂದು ಡಾ. ಝಾಕಿರ್ ನಾಯ್ಕ್ ಇಂಗ್ಲೀಷ್ ಪತ್ರಿಕೆ ‘ದ ವೀಕ್’ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಭಯೋತ್ಪಾದನಾ ಆರೋಪದ ಮೇಲೆ ಬಂಧಿತವಾಗಿರುವ 90% ಮುಸ್ಲಿಮರು ಅಮಾಯಕರಾದರೂ ಕೂಡ 15 ರಿಂದ 20 ವರ್ಷ ಶಿಕ್ಷೆ ಅನುಭವಿಸಿದ ಮೇಲೆ ಮಾತ್ರ ಜೈಲಿನಿಂದ ಬಿಡುಗಡೆಯಾದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇಂತಹ ಸನ್ನಿವೇಶದಲ್ಲಿ ನನಗೂ ಕನಿಷ್ಟ ಎಂದರೂ ಹತ್ತು ವರ್ಷ ಜೈಲು ಶಿಕ್ಷೆ ಆಗಬಹುದು. ಹೀಗಾದಲ್ಲಿ ಇದು ನನ್ನ ಇಡೀ ಕೆಲಸ ಕಾರ್ಯಗಳು ಅಡ್ಡಿಯಾಗಬಹುದು. ನಾನು ಗೊತ್ತಿದ್ದೂ ಆ ರೀತಿ ಮಾಡಲು ನಾನೇನು ಮೂರ್ಖನೇ” ಎಂದು ಡಾ.ನಾಯ್ಕ್ ಪ್ರಶ್ನಿಸಿದ್ದಾರೆ.

NIA ಬಯಸುವುದಾದಲ್ಲಿ ನನ್ನನ್ನು ಮಲೆಷ್ಯಾದಲ್ಲೇ ತನಿಖೆ ಮಾಡಬಹುದು. ನಾನು ಭಾರತಕ್ಕೆ ಬಂದರೆ ನನ್ನನ್ನು ಬಂಧಿಸಲ್ಲ ಎಂದು ಸುಪ್ರಿಂ ಕೋರ್ಟ್ ಭರವಸೆ ನೀಡುವುದಾದರೆ ನಾನು ಭಾರತಕ್ಕೆ ಬರಲು ಸಿದ್ಧವಾಗಿರುವೆ. ನಾನು ಯಾರಿಗೂ ಭಯೋತ್ಪಾದನೆ ಮಾಡಲು ಅಥವಾ ಜನರನ್ನು ಕೊಲ್ಲುವಂತೆ ಪ್ರವಚನ ನೀಡಿಲ್ಲ. ನಿಮಗೆ ಸಂಶಯವಿದ್ದಲ್ಲಿ ನನ್ನ ಪ್ರವಚನದ ವಿಡಿಯೋ ಆಡಿಯೋಗಳನ್ನು ಪರೀಕ್ಷಿಸಬಹುದು ಎಂದು ಡಾ. ಝಾಕಿರ್ ನಾಯ್ಕ್ ಹೇಳಿದ್ದಾರೆ.

Leave a Reply