ಧ್ವನಿ:- ನನಗೆ ಮದುವೆಯಾಗಿ ಐದು ವರ್ಷ ಆಯಿತು. ಇಬ್ಬರು ಮಕ್ಕಳಿದ್ದಾರೆ. ನನ್ನ ಹೆತ್ತವರಿಗೆ ನಾವು ಐದು ಜನ ಹೆಣ್ಣು ಮಕ್ಕಳು. ನಾನು ಮೂರನೇ ಮಗಳಾಗಿರುವೆ. ನನ್ನನ್ನು ನೋಡಲು ಬಂದ ಗಂಡು, ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದು ಕೇಳಿ ಅವನು ಒಳ್ಳೆಯ ಸ್ವಭಾವದ ವ್ಯಕ್ತಿ ಎಂದು ನಂಬಿ ಮದುವೆ ಮಾಡಿಕೊಟ್ಟರು.

ನಂತರ ನಮಗೆ ತಿಳಿಯಿತು. ಆತ ಕುಡುಕ. ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ, ಅದ್ದೂರಿ ಮದುವೆ ಮಾಡುವುದಿಲ್ಲ, ಆದ್ರೆ… ಈ ನನ್ನ ಸಂಗಾತಿಗೆ ಅಂತಹ ಯಾವುದೇ ಉತ್ತಮ ಗುಣ ಇರಲಿಲ್ಲ. ಪತ್ನಿಗೆ ಪ್ರಾಣ ಹೋದಷ್ಟು ಹೊಡೆದು ತಮ್ಮ ಪುರುಷತನ ಪ್ರದರ್ಶಿಸುತ್ತಾರೆ. ಕುಡಿದು ಬಂದು ಚೀರಾಡುವುದು. ನಾನು ಬಾಗಿಲ ಹತ್ತಿರ ನಿಂತು ಪತಿಯನ್ನು ಕಾಯುತ್ತಿದ್ದರೆ… ನೀನು ಯಾವನಿಗೆ ಕಾಯುವುದು? ಯಾರಿಗಾಗಿ ಈ ಚೂಡಿದಾರ ಧರಿಸಿದ್ದು? ಎಂಬ ಸಂಶಯದ ಪ್ರಶ್ನೆ. ಸದಾ ಸಂಶಯ “ನೀನು ಚೆಂದ ವಾಗಿದ್ದಿ.

Image courtesy: Shutterstock

ನೀನು ನನ್ನನ್ನು ಮುದುಕನಾಗಿರುವೆ ಎಂಬ ತಾತ್ಸಾರದಿಂದ ನೋಡುತ್ತಿರು ವೆಯಾ?” ಎಂದು ಕಿಡಿ ಕಾರುತ್ತಾರೆ. ಅವರು ಕುಡಿದು ಬಂದಾಗ ನಾನು ಹೆದರಿ ಮನೆಯೊಳಗೆ ಓಡಿ ಬಿಡುತ್ತೇನೆ. ಆಗ ನೀನು ಯಾರೊಂದಿಗೆ ಮಾತನಾಡುತ್ತಿದ್ದೆ… ನನ್ನನ್ನು ನೋಡಿ ಹೆದರಿ ಓಡಿದ್ದು ಯಾಕೆ? ಎಂದು ಪುನಃ ಪೆಟ್ಟು, ನಾನು ಸದಾ ಭೀತಿಯಲ್ಲೇ ಬದುಕುತ್ತಿದ್ದೇನೆ. ಒಂದಿನವೂ ಪ್ರೀತಿಯ ಮಾತಿಲ್ಲ. ಇಂತಹ ಗಂಡನೊಂದಿಗೆ ಬಾಳುವುದೇಕೆ ಎಂದು ಚಿಂತಿಸಿದರೂ…. ಮಕ್ಕಳಿದ್ದಾರಲ್ಲಾ… ಅವರಿಗಾಗಿ ಬದುಕಬೇಕು ಅನಿಸುತ್ತದೆ.

ಸಾಂತ್ವನ: ಬ್ರಿಟಿಷರು ಮದ್ಯವನ್ನು ಫ್ಯಾಶನ್ ಮತ್ತು ಪ್ರತಿಷ್ಟೆಗಾಗಿ ಉಪಯೋಗಿಸು ತಿದ್ದರು. ಪಾರ್ಟಿಗಳಲ್ಲಿ ಮತ್ತು ನಿದ್ರೆಗಾಗಿ ಬಳಸುತ್ತಿದ್ದರು. ಸ್ಟೈಲ್‌ನಲ್ಲಿ ಗುಟುಕು ಗುಟುಕು ಆಗಿ ಅಲ್ಪವೇ ಅವರ ಹೊಟ್ಟೆ ಸೇರುತ್ತಿತ್ತು. ಭಾರತೀಯರು ಅವರನ್ನು ಅನುಕರಿಸಿದರು…… ಆದ್ರೆ ಗಂಟಲು ಪೂರ್ತಿ ಕುಡಿದು ಮಾನ-ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುವಷ್ಟು ಕುಡಿ ಯಲು ಕಲಿತರು.

ಬ್ರಿಟಿಷರು ಫ್ಯಾಶನ್‌ಗಾಗಿ ಕುಡಿದರೆ, ನಮ್ಮವರು ದುಃಖ, ಕಷ್ಟ-ನಷ್ಟದ ನೆವನ ಹೇಳಿ ಕುಡಿದು ಪತ್ನಿ-ಮಕ್ಕಳ ಬದುಕಿಗೆ ಕೊಳ್ಳಿ ಇಟ್ಟರು. ನಿಮ್ಮ ಪತಿ ಕುಡಿಯಲು ಏನಾದರೂ ಕಾರಣ ಇರಲೇಬೇಕು. ನಾನು ಭಾವಿಸುತ್ತೇನೆ, ಆತನಿಗೆ ತನ್ನಲ್ಲೇ ಏನೋ ಕೀಳರಿಮೆ ಇದೆ. ನಿಮ್ಮ ಪತ್ರದಲ್ಲಿರುವಂತೆ ನಿಮಗೆ ಅವನು ಸರಿಯಾದ ಜೋಡಿ ಅಲ್ಲ ಅನಿಸುತ್ತದೆ. ಅವನು ನಿಮಗಿಂತ ಬಹಳ ಹಿರಿಯವನಾಗಿ ಕಾಣಿಸುತ್ತಾನೆ.

ನೀವು ಚಿಕ್ಕ ಪ್ರಾಯದವರೂ, ಸುಂದರವಾಗಿಯೂ ಇರುವಂತೆ ಇದೆ. ಈ ಕಾರಣ ಅವನಿಗೆ ನಿಮ್ಮ ಮೇಲೆ ಸಂಶಯವಿದೆ. ತನ್ನಲ್ಲೇ ಅವನಿಗೆ ಕೀಳರಿಮೆಯೂ ಇದೆ. ನೀವು ಪರರೊಂದಿಗೆ ಮಾತನಾಡುವುದನ್ನೂ ಅವನು ಸಹಿಸುವುದಿಲ್ಲ. ಇದನ್ನು ‘ಪ್ರೀತಿ’ ಎನ್ನಲೋ ‘ಭ್ರಾಂತಿ’ ಎನ್ನಲೋ ನನಗೂ ತಿಳಿಯದು….

ಮತ್ತೆ ಹೊಡೆಯುವುದು ಆತನ ರಾಕ್ಷಸೀ ಪ್ರವೃತ್ತಿಯಾಗಿದೆ. ನೈಜ ಪೌರುಷ ಇರುವ ಸ್ತ್ರೀಯರ ಮೇಲೆ ಕೈ ಎತ್ತುವುದಿಲ್ಲ. ನಿಂತಲ್ಲಿ, ಕುಳಿತಲ್ಲಿ ಕಾರಣ ಹುಡುಕಿ ಹೊಡೆಯುವುದು ಒಂದು ವಿಧದ ಮಾನಸಿಕ ರೋಗವಾಗಿದೆ. ಪತ್ನಿಗೆ ಹೊಡೆಯುವುದರಲ್ಲಿಯೇ ಇಂತಹ ಪುರುಷರಿಗೆ – ಮಾನಸಿಕ ನೆಮ್ಮದಿ ಸಿಗುತ್ತದೆ. ಏನೋ ಪರಾಕ್ರಮ ಸಾಧಿಸಿದ ಗೆಲುವು ಅವರಿಗೆ ಹೆಣ್ಣಿನ ಕಣ್ಣೀರು ನೋಡಿಯೇ ಅವರಿಗೆ ಶಾಂತಿ ಸಿಗುವುದು. ಕೆಲವು ವೇಳೆ ಹೆಣ್ಣಿನ ನಾಲಗೆಯ ವಾಕ್ ದಾಳಿಗೆ ಪುರುಷನ ‘ಕೈ’ ದಾಳಿ ನಡೆಯುವುದು ಸಹಜ.

ಒಂದು ಸಮೀಕ್ಷೆಯ ಪ್ರಕಾರ ಹಲವು ಪುರುಷರು ತಮ್ಮ ಪತ್ನಿಯ ನಾಲಗೆಯ ಏಟಿಗೆ ತತ್ತರಿಸಿ ಹೋಗಿ ಹೊಡೆಯಲು ಕೈ ಎತ್ತುವುದೇ ಸತ್ಯ ಎಂದು ಹೇಳುತ್ತಾರೆ. ಇಲ್ಲಿ ನೀವು ನಾಲಗೆ ತೋರಿಸದೇ ಬೀಳುವ ಪೆಟ್ಟು ನಿಜಕ್ಕೂ ಖಂಡನೀಯ. ಅವನು ಒಳ್ಳೆಯ ವ್ಯಕ್ತಿ ಎಂದು ತಿಳಿದು ನಿಮ್ಮ ವಿವಾಹವನ್ನು ಮಾಡಿಸ ಲಾಯಿತು. ಪ್ರಥಮವಾಗಿಯೇ ಸುಳ್ಳು ಹೇಳಿ ವಿವಾಹ ಆಗಿರುವುದು ಅವನ ಕಪಟತನಕ್ಕೆ ಸಾಕ್ಷಿ, ಆತನಿಗೆ ತಾನಾಗಿಯೇ ಸುಧಾರಿಸುವ ಮನಸ್ಸು ಬಂದರೆ ಅಂತಹವರನ್ನು ಸರಿಪಡಿಸ ಬಹುದು. ಬಲವಂತ-ಒತ್ತಡದಿಂದ ಇಂತಹ ವರು ಸರಿದಾರಿಗೆ ಬರುವುದಿಲ್ಲ.

ನಿಮ್ಮ ಪತಿಯ ಮನೆಯವರ ನೆರವಿನಿಂದ ಆತನನ್ನು ನೇರ ದಾರಿಗೆ ತರಲು ಪ್ರಯತ್ನಿಸಿರಿ. ಅವನು ಕೇವಲ ಕುಡಿಯುವವನಾಗಿ ಹಿಂಸೆ ನೀಡುತ್ತಿರು ವುದು ಮಾತ್ರವಲ್ಲ, ಆತನು ಸಂಶಯದ ರೋಗವನ್ನು ಅಂಟಿಸಿ ಕೊಂಡಿದ್ದಾನೆ. ವಿವಾಹವು ಒಂದು ಒಪ್ಪಂದ, ಸಾಮ ರಸ್ಯ, ಪ್ರೀತಿ-ವಿಶ್ವಾಸ- ಕಾಳಜಿಯ ಅಡಿಪಾಯ ದಲ್ಲಿ ದಾಂಪತ್ಯದ ಬದುಕು ನೆಲೆ ನಿಲ್ಲುತ್ತದೆ. ಹೊಂದಿಕೊಂಡು ಹೋಗುವುದು ಇದರ ಇನ್ನೊಂದು ಸ್ತಂಭವಾಗಿದೆ. ಬದುಕು ನಿಮ್ಮದು ತೀರ್ಮಾನವೂ ನಿಮ್ಮದೇ.

“ಪೆಟ್ಟು ತಿಂದರೂ ಸಹನೆ ವಹಿಸಿ ಬದುಕಮ್ಮಾ” ಎಂದು ಹೇಳುವ ಕಾಲ ಇದಲ್ಲ. ಆದ್ದರಿಂದ, ದೇವನೊಡನೆ “ನಿನ್ನ ಪತಿಗೆ ಸದ್ಭುದ್ದಿ ನೀಡು” ಎಂದೇ ಪ್ರಾರ್ಥಿಸ ಬಲ್ಲೆ. ಆತನಿಗೆ ಬುದ್ದಿ ಹೇಳುವ ಪ್ರಯತ್ನ ಹಿರಿಯರಿಂದ ನಡೆಯಬೇಕು. ಇನ್ನೂ ಸರಿ ಹೊಂದುವುದು ಕಾಣದೇ ಇದ್ದರೆ, ಸ್ವಂತ ಕಾಲಲ್ಲಿ ನಿಂತು ಗೊತ್ತಿರುವ ಕೆಲಸ ಮಾಡಿ ಸ್ವಾಭಿಮಾನಿಯಾಗಿ ಜೀವಿಸಲು ಕಲಿಯಿರಿ.

Leave a Reply