Image: taste.com

ಬೇಕಾಗುವ ಸಾಮಗ್ರಿ

ಹಸಿರು ಆಪಲ್, (ಕೆಂಪು ಕೂಡ ಆಗುತ್ತದೆ) – 3 ಬೆಣ್ಣೆ – 3 ಟೀ ಸ್ಪೂ., ಸಕ್ಕರೆ – 4 ಟೀ ಸೂ. ಬ್ರೆಡ್ ಹುಡಿ – 2 ಕಪ್, ಕ್ರೀಮ್ – 2 ಟೀ ಸ್ಪೂ. ಆಪಲ್ ತುಂಡು – 1 ಕಪ್ ಮಾಡುವ

ವಿಧಾನ: –

ಆಪಲ್ ಸಿಪ್ಪೆ ಸುಲಿದು, ತುಂಡು ಮಾಡಿ. ತುಂಡುಗಳನ್ನು ನೀರಿಲ್ಲದ ಪಾತ್ರೆಯಲ್ಲಿ ಇಟ್ಟು ಬೇಯಿಸಿ (ಸಣ್ಣ ಉರಿಯಲ್ಲಿ). “ಬೆಣ್ಣೆ ಬಿಸಿ ಮಾಡಿ 2 ಟೀ ಸ್ಪೂ ಸಕ್ಕರೆ ಸೇರಿಸಿ, ಸಕ್ಕರೆ ಕರಗಿದಾಗ 1 ಕಪ್ ಬ್ರೆಡ್ ಹುಡಿಹಾಕಿ, ಸ್ವಲ್ಪ ಬಣ್ಣ ಬದಲಿಸುವ ತನಕ ಹುರಿ ಯಿರಿ. ಉಳಿದ ಬ್ರೆಡ್ ಹುಡಿಯನ್ನು ಬೇಕ್ ಮಾಡುವ ಡಿಶ್‌ಗೆ ಹಾಕಿ ಹರಡಿಸಿ. ಬೇಯಿಸಿದ ಆಪಲನ್ನು ಒಳ್ಳೆ ಜಜ್ಜಿ, ಅದಕ್ಕೆ ಬೆಣ್ಣೆ ಮಿಶ್ರಣ ವನ್ನು ಸೇರಿಸಿ ಬೇಯಿಸಿ. ಈ ಮಿರ್ಶಣವನ್ನು ಬೆಡ್ ಹುಡಿಯನ್ನು ಹರಡಿದ ಡಿಶ್‌ನ ಮೇಲೆ ಹರಡಿ, ಕೈಯಲ್ಲಿ ಒತ್ತಿ. ಇನ್ನು ಓವನ್‌ನಲ್ಲಿ ಇಟ್ಟು 15 ನಿಮಿಷಗಳ ಕಾಲ ಬೇಕ್ ಮಾಡಿ ( ಅಥವಾ ಬಣ್ಣ ಬದಲಾಗುವ ತನಕ ಬೇಕ್ ಮಾಡಿ, ಕ್ರೀಂ ಮತ್ತು ಆಪಲ್ ತುಂಡುಗಳೊಂದಿಗೆ ಅಲಂಕರಿಸಿ ತಿನ್ನಲು ಕೊಡಿ.

Leave a Reply