ಹೌದು. ವಿದ್ಯುತ್ ಈಲ್‍ಗಳು ಒಂದು ಜಾತಿಯ ಮೀನುಗಳಾಗಿದ್ದು ಇವುಗಳ ದೇಹದಿಂದ ವಿದ್ಯುತ್ ಹೊರಡುತ್ತವೆ. ಈ ವಿದ್ಯುತ್ ಈಲ್‍ಗಳಿಗೆ ಆಹಾರವನ್ನು ಹಿಡಿಯಲು ಮತ್ತು ವೈರಿ ಜೀವಿಗಳನ್ನು ಹೆದರಿಸಲು ಸಹಾಯಕವಾಗುತ್ತದೆ. ಈಲ್‍ಗಳು ವಿದ್ಯುತ್ ಶಾಕ್ ನೀಡಿದಾಗ ಎದುರಿಗಿರುವ ಜೀವಿಗಳ ಕೆಲವು ಕ್ಷಣಗಳ ವರೆಗೆ ತಟಸ್ಥವಾಗಿ ಬಿಡುತ್ತವೆ. ಆ ತಟಸ್ಥತೆಯನ್ನೇ ಉಪಯೋಗಿಸಿಕೊಂಡು ಈಲ್‍ಗಳು ಆಹಾರವನ್ನು ಅನ್ವೇಷಿಸಲು ವಿದ್ಯುತ್ ಶಾಕ್ ನೀಡುತ್ತವೆ. ಈಲ್‍ಗಳಿಗೆ ಕೆಲವೊಂದು ವಿಶೇಷವಾದ ದೇಹದ ಅಂಗಾಂಗಳು ವಿದ್ಯುತ್ ಉತ್ಪಾದನೆಗೆ ಮತ್ತು ಉಪಯೋಗವಿದ್ದಾಗ ಬಳಸಲು ಮತ್ತು ಇತರ ಸಮಯದಲ್ಲಿ ಆಫ್ ಆಗಲು ಸಹಾಯ ಮಾಡುತ್ತದೆ.

Leave a Reply