ಸಾಂದರ್ಭಿಕ ಚಿತ್ರ

ಕಾರವಾರ : ಫೇಸ್ಬುಕ್ ಮೂಲಕ ಮೋಸಕ್ಕೆ ಮತ್ತೊಂದು ವಿಕೆಟ್ ಪತನ ಆಗಿದೆ. ಅಪ್ರಾಪ್ತೆಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಆಕೆಯಿಂದ ಪಡೆದು ವಂಚಿಸಿದ ಘಟನೆಯು ಕಾರವಾರದಲ್ಲಿ ನಡೆದಿದೆ.

ಸೋನಾವಾದದ ಬಾಲಕಿ ರಾಹುಲ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತ ತನಗೆ ಆರ್ಥಿಕ ಸಮಸ್ಯೆ ಇದೆ ಎಂದು ನಂಬಿಸಿದ್ದ. ಆದ್ದರಿಂದ ಬಾಲಕಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಆತನಿಗೆ ನೀಡಿದ್ದಾಳೆ. ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಆತ ಚಿನ್ನವನ್ನು ಮಾರಿದ್ದಾನೆ. ನಂತರ ಬಾಲಕಿಯವರ ಮನೆಯವರಿಗೆ ವಿಷಯ ತಿಳಿದು ಅವರು ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ನಂತರ ಕೋರ್ಟ್ ಪೊಲೀಸ್ ಠಾಣೆಗೆ ತನಿಖೆ ನಡೆಸುವಂತೆ ಸೂಚಿಸಿತ್ತು.

Leave a Reply