ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಚಿತ್ರವನ್ನು ಪ್ರಕಟಿಸಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ತನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು. ಅವರು ಬಿಜೆಪಿಯ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರ ಸಬೆಯಲ್ಲಿ ಮಾತನಾಡುತ್ತಾ ಆದೇಶಿಸಿದರು.

ನಕಲಿ ಫೋಟೋ, ನಕಲಿ ಸುದ್ದಿ ಮುಂತಾದುವುಗಳನ್ನು ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಹಾಕಬಾರದೆಂದು ಹೇಳಿದರು. ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಮುನ್ನೂರರಷ್ಟು ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಕಾರ್ಯಾಚರಿಸುತ್ತಿರುವ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗವಹಿಸಿದ್ದರು.

ಮೋದಿ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡಿರಿ ಎಂದೂ ಅವರು ನಿರ್ದೇಶಿಸಿದರು. ಕಾಂಗ್ರೆಸ್ ಸರಕಾರ ಮತ್ತು ಬಿಜೆಪಿ ಸರಕಾರದ ನಡುವೆಯ ತಾರತಮ್ಯ ಮಾಡಿ ವರದಿ ಪ್ರಕಟಿಸಿರಿ ಎಂದು ಹೇಳಿದರು.

Leave a Reply