ಉತ್ತರ ಪ್ರದೇಶದ ಕಾನ್ಪುರದ ಎ ಟಿ ಎಮ್ ನಲ್ಲಿ ಐನೂರರ ಖೋಟಾನೋಟುಗಳು ಪತ್ತೆಯಾಗಿದೆ.

ಹಿಮಾನ್ಶ್ ತ್ರಿಪಾಟಿ ಎಂಬ ಯುವಕ ಖಾಸಗಿ ಬ್ಯಾಂಕೊಂದರ ಎಟಿಎಮ್ ನಿಂದ ಹತ್ತು ಸಾವಿರ ರೂಪಾಯಿ ಪಡೆಯುವಾಗ ಈ ಅನುಭವವಾಗಿದೆ.

Image result for up fake currency in atm

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯುವಲ್ಲಿ ಚಿಲ್ಟ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿತವಾಗಿತ್ತು.

ನೋಡಲು ಅಸಲಿ ನೋಟಿನ ತರಹವೇ ಇತ್ತು. ಈ ಕುರಿತು ತಮ್ಮ ಆಪ್ತ ರಾಮೇಂದ್ರ ಎಂಬವರಲ್ಲಿ ತಿಳಿಸಿದಾಗ ಅವರಿಗೂ ಇದೇ ಅನುಭವವಾಗಿ ಬ್ಯಾಂಕ್‍ಗೆ ಮರಳಿಸಿದಾಗ ನೋಟು ಬದಲಾಯಿಸಿ ಕೊಟ್ಟಿದ್ದರು ಎಂದು ಹೇಳಿದರು.

Related image
ಸಾಂದರ್ಭಿಕ ಚಿತ್ರ

ಆದ್ದರಿಂದ ಬ್ಯಾಂಕಿನವರೇ ನಕಲಿ ನೋಟುಗಳನ್ನು ತುಂಬಿಸುತ್ತಿದ್ದಾರೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply