ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿಯವರ ಸಹೋದರ ಪುತ್ರನ ಹೆಸರು ಕೂಡಾ ಅಸ್ಸಾಮಿನ ಪೌರತ್ವ ಪಟ್ಟಿಯಲ್ಲಿಲ್ಲ.

ಫಕ್ರುದ್ದೀನ್ ಅಲಿಯವರ ಸಹೋದರ ಲೆಫ್ಟಿನೆಂಟ್ ಇಕ್ರಮುದ್ದೀನ್ ಅಲಿ ಯವರ ಪುತ್ರ ನಿಯಾಝುದ್ದೀನ್ ಅಲಿಯವರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ.

ನಮ್ಮ ಕುಟುಂಬದ ಸದಸ್ಯರ ಹೆಸರು ಪಟ್ಟಿಯಿಂದ ಕಾಣೆಯಾದುದು ನೋಡಿ ನಾವು ಆಂತಂಕಗೊಂಡೆವು. ಪಟ್ಟಿಯನ್ನು ಪರಿಶೀಲಿಸಿದಾಗ ಇದು ಅರಿವಿಗೆ ಬಂತು ಎಂದು ನಿಝಾಮುದ್ದೀನ್ ಮಾಧ್ಯಮದವರ ಮುಂದೆ ವಿವರಿಸಿದ್ದಾರೆ.

ಇವರು ಅಸ್ಸಾಮಿನ ಕಮ್‍ರೂಪ್ ಜಿಲ್ಲೆಯಲ್ಲಿ ವಾಸವಾಗಿದ್ದು, ಇದೇ ಸಂದರ್ಭದಲ್ಲಿ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿದ್ದರೆ ಅಂತಹವರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿದೆಯೆಂದು ರಿಜಿಸ್ಟರ್ ಜನರಲ್ ಸೆನ್ಸಸ್ ಕಮೀಶನರ್ ಶೈಲೇಶ್ ಮಾಧ್ಯಮದವರ ಮುಂದೆ ವಿವರಿಸಿದರು.

ಈ ಬಗ್ಗೆ ಪ್ರತಿಪಕ್ಷಗಳು ಸಂಸತ್ ಹಾಗೂ ರಾಜ್ಯಸಭೆಗಳಲ್ಲಿ ಗದ್ದಲವೆಬ್ಬಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply