ಇದು ನಮ್ಮ ಊರು: ಮನುಷ್ಯ ಆರೋಗ್ಯವಾಗಿರಲು ದೇಹಕ್ಕೆ ಉತ್ತಮ ಪೌಷ್ಟಿಕ ಆಹಾರ ಮತ್ತು ವ್ಯಾಯಾಮದ ಜೊತೆಗೆ ಉತ್ತಮವಾದ ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹಕ್ಕೆ ಮಧುಮೇಹ, ಪಾರ್ಶ್ವವಾಯು, ಬೊಜ್ಜು ಮತ್ತು ಮಾನಸಿಕ ಅಸ್ವಸ್ಥತೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಮನುಷ್ಯ ದೇಹವು ಕನಿಷ್ಠ 8 ಗಂಟೆಗಳ ನಿದ್ರೆ ಪಡೆಯುವುದು ಬಹಳ ಮುಖ್ಯ.

ಉತ್ತ್ತಮವಾದ ನಿದ್ರೆ ಪಡೆಯಲು ಮಲಗುವ ಮುನ್ನ ಐದು ನಿಮಿಷಗಳ ಕಾಲ ದೇಹವನ್ನು ನಾಲ್ಕು ಕಡೆಗೆ ಸ್ಟ್ರೆಚ್ ಮಾಡುವುದು ಬಹಳ ಪ್ರಯೋಜನ ಕಾರಿ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ದೇಹದ ಕೈ ಕಾಲು ಗಳನ್ನೂ ಅಗಲವಾಗಿ ಚಾಚಿ ಸುಮಾರು ಐದು ನಿಮಿಷಗಳ ಕಾಲ ಮಲಗಬೇಕು ಇದು ಉತ್ತಮ ನಿದ್ರೆಗೆ ಮುನ್ನುಡಿ ಬರೆಯಲು ಸಹಾಯ ಮಾಡುತ್ತದೆ ಎಂದು ಎಕ್ಸ್ ಪರ್ಟ್ ಗಳ ಅಭಿಪ್ರಾಯವಾಗಿದೆ.

Leave a Reply