Image : Moneycontrol

ಮುಂಬೈ: ದೇಶಾದ್ಯಂತ ಜಾರಿಗೆ ಬಂದಿರುವ ಏಕರೂಪದ ಜಿಎಸ್ಟಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಮುನ್ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಮುಂಬೈನಲ್ಲಿ ಮಂಗಳವಾರ ಸಾರ್ವಜನಿಕ ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ಶೇ18 ಇಲ್ಲವೇ ಅದಕ್ಕಿಂತ ಕಡಿಮೆಯ ಜಿಎಸ್ಟಿ ಸ್ತರದಲ್ಲಿ ಶೇ.99ರಷ್ಟು ವಸ್ತುಗಳನ್ನು ಒಳಪಡಿಸುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

ಜಿಎಸ್ಟಿ ಅನುಷ್ಠಾನಕ್ಕೂ ಮೊದಲು 65 ಲಕ್ಷ ಉದ್ದಿಮೆಗಳು ಮಾತ್ರ ನೋಂದಣಿಯಾಗಿದ್ದವು. ಈಗ ಅದು ಶೇ.55ರಷ್ಟು ಏರಿಕೆಯಾಗಿದೆ. ಜಿಎಸ್ಟಿಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶ ತಮ್ಮ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಡಿ.22ರಂದು ದೆಹಲಿಯಲ್ಲಿ ಜಿಎಸ್ಪಿ ಮಂಡಳಿಯ 31ನೇ ಸಭೆ ನಡೆಯಲಿದ್ದು ಅನೇಕ ಮಹತ್ವದ ವಿಷಯಗಳ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ.

Leave a Reply