ಚಂಡೀಗಢ: ಮುಸ್ಲಿಂ ಯುವಕೊಬ್ಬನನ್ನು ಗಡ್ಡ ತೆಗೆಸಬೇಕೆಂದು ಒತ್ತಾಯಿಸಿ ಹಲ್ಲೆ ಮಾಡಿ, ಬಲವಂತವಾಗಿ ಕ್ಷೌರ ಮಾಡಿಸಿದ ಘಟನೆ ಹರಿಯಾಣದ ಗುರು ಗ್ರಾಮದಲ್ಲಿ ನಡೆದಿದೆ.

ಮೇವಾತ್ ಜಿಲ್ಲೆಯ ಬದ್ಲಿ ನಿವಾಸಿ ಜಾಫರ್ ಉದ್ದಿನ್ ಬಲವಂತವಾಗಿ ಜಾಫರುದ್ದಿನ್‍ನನ್ನು ಕ್ಷೌರದ ಅಂಗಡಿಗೆ ಕೊಂಡೊಯ್ದಿದ್ದು ಅಲ್ಲಿ ಗಡ್ಡ ತೆಗೆಯಲು ನಿರಾಕರಿಸಿದ ಕ್ಷೌರಿಕನ ಮೇಲೂ ದುಷ್ಕಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ತನ್ನ ಮಿತ್ರನನ್ನು ಭೇಟಿಯಾಗಲು ಬಂದಿದ್ದ ಜಾಫರ್ , ಆರಂಭದಲ್ಲಿ ಆರೋಪಿಗಳು ಧಾರ್ಮಿಕವಾಗಿ ನಿಂದಿಸಲು ತೊಡಗಿದ್ದನ್ನು ಕಡೆಗಣಿಸಿದರು. ನಂತರ ಆರೋಪಿಗಳು ಜಾಫರುದ್ದೀನ್ ನನ್ನು ಥಳಿಸಲು ಪ್ರಾರಂಭಿಸಿದರು. ನಂತರ ಅವರ ಮಧ್ಯೆ ವಾಗ್ವಾದವುಂಟಾಯಿತು. ಆತನನ್ನು ಒಂದು ಸಲೂನ್ ಗೆ ಕರೆದೊಯ್ದು ಗಡ್ಡ ತೆಗೆಸಿದರು ಎಂದು ಗುರ್ಗಾಂವ್ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಭಾಷ್ ಬೊಕನ್ ಪಿಟಿಐಗೆ ತಿಳಿಸಿದರು.

ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಆದರೂ ಮರುದಿನ ಈ ಕುರಿತು ಜಾಫರುದ್ದಿನ್ ಗುರುಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಲಾಗಿದೆ.

Leave a Reply