ಇಂದೋರ್: ತನ್ನ ಪುತ್ರನಿಗೆ ಸರಕಾರ ಗೌರವ ಸಲ್ಲಿಸುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಅದರ ಜೊತೆಗೆ ಆತ ಇಂದು ತನ್ನೊಂದಿಗಿಲ್ಲ ಎನ್ನುವ ಬೇಸರವೂ ಇದೆ ಎಂದು ಹುತಾತ್ಮ ಯೋಧ ಔರಂಗಝೇಬ್ ತಾಯಿ ಹೇಳಿದ್ದಾರೆ.

“ಅವನಿಗೆ ಶೌರ್ಯ ಚಕ್ರ ಪುರಸ್ಕಾರ ಲಭಿಸುತ್ತಿರುವುದರಿಂದ ಸಂತೋಷವಾಗಿದೆ. ಆದರೆ ಆತ ನಮ್ಮೊಂದಿಗಿಲ್ಲ ಎನ್ನುವ ದುಃಖವೂ ಇದೆ” ಎಂದವರು ಹೇಳಿದರು.

ರೈಫ‌ಲ್‌ ಮ್ಯಾನ್‌ ಔರಂಗಜೇಬ್‌ ಅವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಭಾರೀ ಶಸ್ತ್ರ ಸಜ್ಜಿತ ಉಗ್ರರು ಅವರನ್ನು ಗನ್‌ ಪಾಯಿಂಟ್‌ನಲ್ಲಿ ಅಪಹರಿಸಿ ಗುಂಡಿನ ಸುರಿಮಳೆಗೈದು ಅವರನ್ನು ಬರ್ಬರವಾಗಿ ಕೊಂದಿದ್ದರು.

ಔರಂಗಜೇಬ್‌ ಅವರು ಜಮ್ಮು ಕಾಶ್ಮೀರ ನಾಲ್ಕನೇ ಲೈಟ್‌ ಇನ್‌ಫ್ಯಾಂಟ್ರಿಗೆ ಸೇರಿದವರು. ಇವರನ್ನು ಶೋಪಿಯಾನ್‌ನ ಶಾದಿಮಾರ್ಗ್‌ನಲ್ಲಿರುವ 44ನೇ ರಾಷ್ಟ್ರೀಯ ರೈಫ‌ಲ್ಸ್‌ ದಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇವರು ಮೇಜರ್‌ ರೋಹಿತ್‌ ಶುಕ್ಲಾ ತಂಡದ ಭಾಗವಾಗಿದ್ದರು. ಇವರ ತಂಡ ಅತ್ಯುನ್ನತ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಮೀರ್‌ ಟೈಗರ್‌ನನ್ನು ಎನ್‌ಕೌಂಟರ್‌ ಮಾಡಿದ್ದರು.

Leave a Reply