Image : GNS News

ಹೊಸದಿಲ್ಲಿ: ಬಾಬಾ ರಾಮ್‍ದೇವ್‍ರ ಕಂಪೆನಿ ಪತಂಜಲಿ ಆಯುರ್ವೇದಿಕ್ ಲಿಮಿಟೆಡ್‍ನ ಆದಾಯವನ್ನು ಆದಾಯ ತೆರಿಗೆ ಇಲಾಖೆ ವಿಭಾಗ ತನಿಖೆ ನಡೆಸಬೇಕೆಂದು ದಿಲ್ಲಿ ಹೈಕೋರ್ಟು ಆದೇಶ ನೀಡಿದೆ.

ಪತಂಜಲಿ ಆಯುರ್ವೇದ್ ಲಿಮಿಟೆಡ್ ಆದಾಯ ತೆರಿಗೆಯ ವಿಶೇಷ ತನಿಖೆ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿತುತ. ಜಸ್ಟಿಸ್ ಎಸ್ ರವೀಂದರ್ ಭಟ್ ಅಧ್ಯಕ್ಷ ಪೀಠ ಆದಾಯ ತೆರಿಗೆ ವಿಭಾಗದ ತನಿಖೆಯಲ್ಲಿ ಯಾವುದೇ ಅಹಿತಕರ ವಿಷಯವಿಲ್ಲ. ಆದ್ದರಿಂದ ಆದಾಯ ತೆರಿಗೆ ವಿಭಾಗಕ್ಕೆ ಸಹಕರಿಸಬೇಕೆಂದು ಕೋರ್ಟು ತಿಳಿಸಿದೆ. ದಿಲ್ಲಿ ಹೈಕೋರ್ಟಿನಲ್ಲಿ 2010ರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

ಆದಾಯ ತೆರಿಗೆ ವಿಭಾಗವು ಪತಂಜಲಿಗೆ ಹಲವು ಖಾತೆಗಳಿವೆ. ಆದ್ದರಿಂದ ವಿಶೇಷ ಆಡಿಟ್ ಮಾಡಬೇಕಾಗಿದೆ. ಕಂಪೆನಿಗೆ ಎಲ್ಲೆಲ್ಲಿಂದ ಆದಾಯ ಬಂದಿದೆ ಎಂದು ವಿಶೇಷ ಅಡಿಟ್‍ನಿಂದ ಮಾತ್ರ ಸಿಗಲು ಸಾಧ್ಯವಿದೆ ಎಂದು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಿತ್ತು.

ಪತಂಜಲಿಯು 2010-11ರ ಆದಾಯ ತೆರಿಗೆ ವಿಭಾಗದ ಅಸೆಸ್‍ಮೆಂಟ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೋರ್ಟಿನ ಮೆಟ್ಟಿಲೇರಿತ್ತು. ಪತಂಜಲಿ ಇನ್‍ಕಂಟ್ಯಾಕ್ಸ್ ಅಧಿಕಾರಿಗಳು ತಮ್ಮ ಜಿಮ್ಮೆದಾರಿಯಿಂದ ಪಾರಾಗಲು ವಿಶೇಷ ತನಿಖೆಯ ಎನ್ನುತ್ತಿದೆ. ಆದರೆ ಆದಾಯ ತೆರಿಗೆ ಇಲಾಖೆ ಕಂಪೆನಿಯ ಖಾತೆಯಲ್ಲಿ ಹಣದ ಮೂಲ ಎಲ್ಲಿಂದ ಬಂದದೆಂದು ತಿಳಿಯಲು ತನಿಖೆ ಅಗತ್ಯವಿದೆ.

ಪತಂಜಲಿ ತೆರಿಗೆ ನಿರ್ಧರಿಸುವ ಅಧಿಕಾರಿಯ ಉದ್ದೇಶವನ್ನು ಪ್ರಶ್ನಿಸಿ ದಾವೆ ಹೂಡಿದ್ದನ್ನು ಹೈಕೋರ್ಟು ತಳ್ಳಿ ಹಾಕಿದೆ. ಕೋರ್ಟು ವಿಶೇಷ ತನಿಖೆಗೆ ಸಹಮತ ವ್ಯಕ್ತಪಡಿಸಿದೆ. ಅಂತಹ ತನಿಖೆ ನಡೆಸುವ ಅಧಿಕಾರ ಆದಾಯ ತೆರಿಗೆ ಇಲಾಖೆಗೆ ಇದೆ. ಆದರೆ ಎಲ್ಲ ಪ್ರಕರಣದಲ್ಲಿ ವಿಶೇಷ ಆಡಿಟ್ ಮಾಡಬೇಕಾದ ಅಗತ್ಯವಿಲ್ಲ ಎಂದು ಕೋರ್ಟು ತಿಳಿಸಿದೆ.

ಐದು ವರ್ಷಗಳಲ್ಲಿ ಮೊದಲ ಬಾರಿ ಪತಂಜಲಿ ಉತ್ಪನ್ನಗಳ ಮಾರಾಟದಲ್ಲಿ ಇಳಿ ಮುಖ ಕಂಡು ಬಂದಿದೆ. ಜಿಎಸ್‍ಟಿ ಮತ್ತು ದುರ್ಬಲ ಮಾರುಕಟ್ಟೆ ನೆಟ್‍ವರ್ಕ್ ಕಾರಣದಿಂದ ಕಂಪೆನಿಯ ಆದಾಯ 2013ರ ನಂತರ ಮಾರ್ಚ್ 2018 ರವರೆಗಿನ ಹತ್ತು ವರ್ಷದಲ್ಲಿ 8148 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

Leave a Reply