ನವದೆಹಲಿ : ನವ ದೆಹಲಿಯ ಸಮೀಪ ಗಾಝೀಯಾಬಾದ್ ನಗರದಲ್ಲಿ ಒಂದು ಕ್ರೂರತೆಯ ಭಯಾನಕ ಘಟನೆ ವರದಿಯಾಗಿದೆ. ಇಬ್ಬರು ಪುರುಷರು ಐದು ನಾಯಿ ಮರಿಗಳ ತಾಯಿ ನಾಯಿಯನ್ನು ಭೀಕರವಾಗಿ ಅತ್ಯಾಚಾರ ಮಾಡಿ, ಬಳಿಕ ತಮ್ಮ ವಿಕೃತ ಕಾಮತೀಟೆ ಮುಗಿದ ಬಳಿಕ ಅದನ್ನು ನಿರ್ದಯವಾಗಿ ಕೊಂದು ಬಿಟ್ಟಿದ್ದಾರೆ. ಈ ಘಟನೆ ನಡೆಯುವ ವೇಳೆಯಲ್ಲಿ ನಾಯಿಯು ತನ್ನ ಮರಿಗಳಿಗೆ ಹಾಲು ಕುಡಿಸುತ್ತಿತ್ತು. ಅತ್ಯಾಚಾರ ಮಾಡಿದ ಬಳಿಕ ನಾಯಿಯನ್ನು ಸ್ಕೂಟರ್ ಗೆ ಕಟ್ಟಿ ನಾಲ್ಕು ಕಿಲೋಮೀಟರ್ ಜೀವಂತ ಎಳೆದುಕೊಂಡು ಹೋಗಿದ್ದಾರೆ. ಆದರೂ ಸ್ಥಳೀಯರು ಹೀಗೆ ಮಾಡುವುದನ್ನು ನೋಡಿ ತಡೆಯಲು ಮುಂದಾಗಿಲ್ಲ ಎಂಬುದು ದುರದೃಷ್ಟಕರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ನೆಡು ಹೇಳಲಾಗಿದೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply