ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತಕ್ಕೆ ಆರಂಭಿಕ ಆಘಾತವಾಗಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ 28 ರನ್ನಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ರಿಕಾನರ ಫ್ರಾರಂಭ ಕೂಡ ಟೀಮ್‌ ಇಂಡಿಯಾದ ಶೈಲಿಯಲ್ಲೇ ಇತ್ತು. ಆರಂಭಿಕ ಜೋಡಿಗಳಾದ  ಎಲ್ಗರ್, ಮಾರ್ಕರ್ಮ್ ವನ್ ಡೌ ಆಗಿ ಬಂದ ಹಾಶೀಮ್ ಆಮ್ಲಾರನ್ನು ವೇಗಿ ಭುವನೇಶ್ವರ್ ಕುಮಾರ್ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಗೆ ಕಳುಹಿಸಿದರು. ಐದನೆಯ ವಿಕೆಟಿಗೆ ಜೊತೆಯಾದ ಕಪ್ತಾನ ಡು ಪ್ಲೆಸಿಸ್ ಹಾಗು ಸ್ಟೋಟಕ ಬ್ಯಾಟ್ಸ್‌ಮನ್ ಎಬಿಡಿ ವಿಲ್ಲಿಯರ್ಸ್ ತಂಡದ ಮೊತ್ತವನ್ನು ನೂರಾರ ಗಡಿ ದಾಟಿಸಿದರು. ವಿಲ್ಲಿಯರ್ಸ್ 65, ಡು ಪ್ಲೆಸಿಸ್ 62 ರನ್‌ಗಳ ಕೊಡುಗೆಯನ್ನು ನೀಡಿದರು. ಇವರಿಬ್ಬರ ನಿರ್ಗಮನದ ಬಳಿಕ ಅಂಕಣಕ್ಕೆ ಬಂದ ಡಿಕೋಕ್ ವೇಗದ 43 ರನ್‌, ಪಿಲಾಂಡರ್ 23, ಮಹರಾಜ 35 ರನ್‌ಗಳ ಸಹಾಯದಿಂದ ದಕ್ಷಿಣ ಆಫ್ರಿಕಾ 286ರನ್‌ಗಳನ್ನು ದಾಖಲಿಸಿತು. ಭಾರತದ ಪರ ವೇಗಿ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ ಅಶ್ವಿನ್ 2 ವಿಕೆಟ್ ಪಡೆದರು.

ಅಲ್ಪ ವಿರಾಮದ ಬಳಿಕ ಬ್ಯಾಟ್‌ ಮಾಡಲು ಬಂದ ಆರಂಭಿಕ ದಾಂಡಿಗ ಮುರಳಿ ವಿಜಯ್ 1, ಶಿಖರ್ ದವನ್ 16, ಕಪ್ತಾನ ಕೋಹ್ಲಿ ಎರಡಂಕಿ ತಲುಪಲು ವಿಫಲರಾದರು. ಎರಡನೇ ದಿನದ ಬ್ಯಾಟಿಂಗ್‌ಗಾಗಿ ಚೇತೆಶ್ವರ್ ಪುಜಾರ 5 ರೋಹಿತ್ ಶರ್ಮಾ 0 ಕಾಯ್ದಿರಿಸಿದ್ದಾರೆ.

Leave a Reply