ಈ ಭಿಕ್ಷುಕ ಅಂತಿಂತಹ ಸಾಮಾನ್ಯ ಭಿಕ್ಷುಕ ಅಲ್ಲ. ಈ ಭಿಕ್ಷುಕನ ಆದಾಯ ಕೇಳಿದರೆ ನೀವು ಬೆಚ್ಚಿಬೀಳಬಹುದು. ಅಷ್ಟು ಮಾತ್ರವಲ್ಲ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಪ್ರತಿರೂಪದಂತಿದ್ದಾನೆ ಈ ಭಿಕ್ಷುಕ. ಜಾರ್ಖಂಡ್ನ ರಾಂಚಿಯ ನಲ್ವತ್ತು ವರ್ಷ ವಯಸ್ಸಿನ ಚೋಟು ಬೈರಕ್ ಎಂಬ ಕುಬ್ಜ ಭಿಕ್ಷುಕನಿಗೆ ಹುಟ್ಟಿನಿಂದಲೇ ಸೊಂಟದ ಕೆಳಗೆ ಬಲವಿರಲಿಲ್ಲ. ಆದ್ದರಿಂದ ಭಿಕ್ಷಾಟನೆಯೇ ಬದುಕಿನ ದಾರಿಯಾಯಿತು. ಆದರೆ ಈ ಕುಬ್ಜ ಭಿಕ್ಷುಕನ ತಿಂಗಳ ಆದಾಯ ಬರೋಬ್ಬರಿ 30 ಸಾವಿರ ಅಂದರೆ ವರ್ಷಕ್ಕೆ ನಾಲ್ಕು ಲಕ್ಷ ಸಂಪಾದನೆ ಇದೆ. ಮಾತ್ರವಲ್ಲ, ಈತ ಮೂರು ಮದುವೆಯಾಗಿದ್ದು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ.

ಜಾರ್ಖಂಡ್ ಚಕ್ರಧರ್ ರೈಲ್ವೆ ನಿಲ್ದಾಣನದಲ್ಲಿ ಭಿಕ್ಷೆ ಬೇಡುವ ಈತ ಈಗ ಪಾತ್ರೆ ಅಂಗಡಿಯನ್ನು ತರೆದು ವ್ಯಾಪಾರ ಪ್ರಾರಂಭಿಸಿದ್ದಾನೆ. ಜೊತೆಗೆ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿರುವುದಾಗಿ ತನ್ನ ಐಡೆಂಟಿಟಿ ಕಾರ್ಡ್ ತೋರಿಸುತ್ತಾರೆ. ತನ್ನ ಪತ್ನಿಯರನ್ನೂ ಬಿಸಿನೆಸ್ ಮತ್ತು ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದು ಕುಳ್ಳನಿಗೆ ಎಂಟು ಬುದ್ಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.

Leave a Reply