538141163

ಹೊಸದಿಲ್ಲಿ: ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪರಿಸರ ವಿಜ್ಞಾನಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿರುವ ರಾಜೇಂದ್ರಕುಮಾರ್ ಪಚೌರಿ ವಿರುದ್ಧ ಕೇಸು ದಾಖಲಿಸಲು ಅನುಮತಿಸಿ ಕೋರ್ಟುತೀರ್ಪು ನೀಡಿದೆ.

ಸದ್ಯ ಈಹಗರ ಪಚೌರಿಯನ್ನು ಬೇತಾಳದಂತೆ ಬೆನ್ನು ಹತ್ತಿದೆ. ದಿಲ್ಲಿ ಕೋಟು ಅವರ ವಿರುದ್ಧ ಮಹಿಳಾತ್ವದ ಅಪಮಾನಿಸುವಿಕೆ, ದೈಹಿಕ ಕಿರುಕುಳ, ಅಶ್ಲೀಲ ಮಾತಾಡಿದ್ದು, ಕುಚೇಷ್ಟೇ ಇತ್ಯಾದಿ ಆರೋಪವನ್ನು ಹೊರಿಸಬೇಕೆಂದು ತಿಳಿಸಿದೆ. ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಅಕ್ಟೋಬರ್ 20ಕ್ಕೆ ನಡೆಯಲಿದೆ.

ದೂರುದಾರೆ ಮಹಿಳೆ ದಿಲ್ಲಿಕೋರ್ಟಿನ ತೀರ್ಪಿನ ಕುರಿತು ಹರ್ಷ ವ್ಯಕ್ತಪಡಿಸಿದ್ದು ತುಂಬ ಸಂತೋಷ ಆಗುತ್ತಿದೆ. ಇದು ಸತ್ಯದೆಡೆಗಿನ ಧಾವಂತ. ಇದು ಸುಲಭದಲ್ಲಿ ದಕ್ಕಲಿಲ್ಲ. ದೀರ್ಘಕಾಲದ ಕಾಯುವಿಕೆಯ ನಂತರ ತನ್ನ ಪರ ತೀರ್ಪು ಬಂದಿದೆ ಪ್ರತಿಕ್ರಿಯಿಸಿದ್ದಾರೆ.

ಕೋರ್ಟು ತೀರ್ಪಿನ ಕುರಿತು ಏನೂ ಹೇಳಲಾರೆ, ತಾನೀಗ ದೇಶದಿಂದ ಹೊರಗಿದ್ದೇನೆ ಮತ್ತು ಅಭಿಪ್ರಾಯ ಹೇಳಲು ಬಯಸುವುದಿಲ್ಲ ಎಂದು ಪಚೌರಿ ಪ್ರತಿಕ್ರಿಯಿಸಿದರು 2015ರಲ್ಲಿ ಸಹೋದ್ಯೋಗಿಯ ದೂರಿನಲ್ಲಿ ಪಚೌರಿ ವಿರುದ್ಧ ಎಫ್‍ಐಆರ್ ಆಗಿತ್ತು. ಆ ನಂತರ ಬಹಳ ಷ್ಟು ಮಹಿಳೆಯರು ಪಚೌರಿ ವಿರುದ್ಧ ಇಂತಹದೇ ಆರೋಪಗಳನ್ನು ಹೊರಿಸಿ ರಂಗಪ್ರವೇಶಿಸಿದ್ದರು.

ತಮ್ಮ ವಿರುದ್ಧ ವರದಿಮಾಡುವುದರಿಂದ ಮಾಧ್ಯಮಗಳನ್ನು ತಡೆಯಬೇಕೆಂದು ಪಚೌರಿ ದಿಲ್ಲಿಯ ಇನ್ನೊಂದು ಕೋರ್ಟಿನಲ್ಲಿ ಸಲಸಿದ್ದರು. ಆದರೆ ಕೋರ್ಟುಅದನ್ನು ತಿರಸ್ಕರಿಸಿತ್ತು. ಹವಾಮಾನ ವೈಪರೀತ್ಯದ ಕುರಿತ ಅಂತಾರಾಷ್ಟ್ರೀಯ ಪ್ಯಾನೆಲ್‍ನ ಅಧ್ಯಕ್ಷರಾಗಿದ್ದ ಪಚೌರಿ ಲೈಂಗಿಕ ವಿವಾದದ ಬಳಿಕ 2015ರಲ್ಲಿ ರಾಜೀನಾಮೆ ನೀಡಿದ್ದರು.

Leave a Reply