ಹೈದರಾಬಾದ್: ಪ್ರತಿ ತಂದೆ ತಾಯಿಗಳಿಗೆ ಅವರ ಮಕ್ಕಳು ದೊಡ್ಡದಾಗಿ ತಮಗೆ ಹೆಸರು ತರಬೇಕೆನ್ನುವ ಕನಸಿರುತ್ತದೆ.

ಇಂತಹ ಒಂದು ದೃಶ್ಯ ತೆಲಂಗಾಣದಲ್ಲಿ ಕಂಡು ಬಂದಿದೆ. ಅಲ್ಲಿ ಡಿಸಿಪಿ ತಂದೆ ತುಂಬಿದ ಸಭೆಯಲ್ಲಿ ಎಸ್ಪಿ ಪುತ್ರಿಗೆ ಸೆಲ್ಯೂಟ್ ಹೊಡೆದರು. ತಂದೆ ಮಗಳನ್ನು ಮೇಲಧಿಕಾರಿಯ ಭಾವದಲ್ಲಿ ನೋಡಿದಾಗ ನೋಡುಗರ ಮನಸ್ಸಿನಲ್ಲಿ ಮುಗುಳ್ನಗು ಮೂಡಿತು. ಸ್ವಯಂ ತಂದೆಯ ಮುಖದಲ್ಲಿ ಮುಗಳ್ನಗುವಿತ್ತು.
ರವಿವಾರ ಹೈದರಾಬಾದನಲ್ಲಿ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್‍ಎಸ್) ರ್ಯಾಲಿಯಿತ್ತು. ಅಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಡಿಸಿಪಿ ಏಆರ್ ಉಮಾಮಹೇಶ್ವರ ಶರ್ಮಕೂಡ ಇದ್ದರು. ಆಗ ಅವರ ಐಪಿಎಸ್ ಪುತ್ರಿ ಸಿಂಧೂ ಶರ್ಮ ಎದುರಿಗೆ ಬಂದರು. ಆಗ ಡಿಸಿಪಿ ಹೆಮ್ಮೆಯಿಂದ ಸಲಾಂ ಹೊಡೆದರು.

ಉಮಾಮಹೇಶ್ವರರು ಕಳೆದ 30 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು ಈಗ ಡಿಸಿಪಿಯಾಗಿದ್ದಾರೆ.ಮುಂದಿನ ವರ್ಷ ಅವರು ನಿವೃತ್ತರಾಗಲಿದ್ದಾರೆ.

ಅವರ ಮಗಳು ಸಿಂಧು 2014 ಬ್ಯಾಚ್‍ನ ಐಪಿಎಸ್ ಅಧಿಕಾರಿ ಮತ್ತು ಸಿಂಧೂಗೆ ನಾಲ್ಕುವರ್ಷದ ಹಿಂದೆ ಪೊಲೀಸ್‍ನಲ್ಲಿ ಕೆಲಸಸಿಕ್ಕಿತ್ತು.

ಉಪನಿರೀಕ್ಷಕರಾಗಿ ಕೆಲಸ ಆರಂಭಿಸಿ ಇತ್ತೀಚೆಗೆ ಐಪಿಎಸ್ ರ್ಯಾಂಕ್‍ಗೆ ಬಂದ ಉಮಾಮಹೇಶ್ವರ ಶರ್ಮ ನಾವು ಮೊದಲ ಬಾರಿ ಕರ್ತವ್ಯದ ವೇಳೆ ಎದುರು ಬದುರು ಬಂದಿದ್ದೇವೆ. ನಾನು ಭಾಗ್ಯಶಾಲಿ ಮಗಳ ಜೊತೆ ಕೆಲಸ ಮಾಡು ಅವಕಾಶ ಸಿಕ್ಕಿತು.

ಸಾಂದರ್ಭಿಕ ಚಿತ್ರ

ನನ್ ಮಗಳುನನಗಿಂತ ಉನ್ನತ ಅಧಿಕಾರಿ ಆಗಿದ್ದಾರೆ. ಯಾವಾಗ ಅವರನ್ನು ನೋಡಿದರೂ ಸಲ್ಯೂಟ್ ಹೊಡೆಯುತ್ತೇನೆ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಮತ್ತು ಇದರ ಕುರಿತು ಚರ್ಚಿಸುವುದಿಲ್ಲ. ತಂದೆ ಮಗಳ ರೀತಿಯಲ್ಲಿಯೇ ಮನೆಯಲ್ಲಿರುತ್ತೇವೆ.

ರ‌್ಯಾಲಿಯಲ್ಲಿ ಮಹಿಳೆಯರ ಸುರಕ್ಷೆಯ ವ್ಯವಸ್ಥೆಯನ್ನುಸಿಂಧೂ ನಿಭಾಯಿಸುತ್ತಿದ್ದರು. ಸಿಂಧೂ ಕೂಡ ತಂದೆಯ ಜೊತೆ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Leave a Reply