ಕೋಟ್ಟಯಂ: ಕೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಜಲಂಧರ್ ಮಾಜಿ ಬಿಷಪ್ ಫ್ರಾಂಕೊ ಮುಳಯ್ಕಲ್‍ರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಪಾಲ ಜ್ಯಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟು ತಳ್ಳಿಹಾಕಿದ್ದು ಮೂರು ದಿವಸ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕೆಳ ಕೋರ್ಟಿನಲ್ಲಿ ಜಾಮೀನು ನಿರಕಾರಿಸಲಾದ ಹಿನ್ನೆಲೆಯಲ್ಲಿ ಅವರು ಸೋಮವಾರ ಸೆಶನ್ಸ್ ಕೋರ್ಟಿನಲ್ಲಿ ಅಥವಾ ಹೈಕೋರ್ಟಿನಲ್ಲಿ ಜಾಮೀನಿಗೆ ಪ್ರಯತ್ನಿಸಬಹುದಾಗಿದೆ.

ಸಾಕ್ಷ್ಯಸಂಗ್ರಹ ಇತ್ಯಾದಿ ಕಾರ್ಯ ಪೂರ್ತಿಗೊಳಿಸುವ ನಿಟ್ಟಿನಲ್ಲಿ ಬಿಷಪ್‍ರನ್ನು 24ನೆ ತಾರೀಕಿನವರೆಗೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೋರ್ಟು ಬಿಷಪ್‍ಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಕುರವಿಲಂಗಾಡ್ ಆಶ್ರಮಕ್ಕೆ ಕರೆದುಕೊಂಡು ಬಂದು ಸಾಕ್ಷ್ಯ ಸಂಗ್ರಹಿಸಲು ಮೊಬೈಲ್ ಫೋನ್,ಯಾಟಾಪ್ ಮೊದಲಾದ ಪ್ರಧಾನ ಪುರಾವೆಗಳನ್ನು ಪತ್ತೆಹಚ್ಚಲು, ಲೈಂಗಿಕ ಸಾಮಥ್ರ್ಯ ಪರಿಶೀಲನೆ ನಡೆಸಲು ಮೂರುದಿವಸ ಪೊಲೀಸ್ ಕಸ್ಟಡಿಗೆ ಬಿಷಪ್‍ರನ್ನು ಬಿಟ್ಟುಕೊಡಬೇಕೆಂದು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಮನವಿಸಲ್ಲಿಸಿದ್ದರು.

ಈ ನಡುವೆ ರಕ್ತ ಮತ್ತು ಉಗುಳನ್ನು ಅನುಮತಿಯಿಲ್ಲದೆ ಬಲವಂತದಿಂದ ಪರೀಕ್ಷೆಗಾಗಿಪಡೆಯಲುಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಫ್ರಾಂಕೊ ವಕೀಲರ ಮೂಲಕ ಕೋರ್ಟಿಗೆ ತಿಳಿಸಿದರು. ಕೋರ್ಟು ಈ ಕುರಿತು ಏನೂ ಹೇಳಿಲ್ಲ. ಕ್ರೈಸ್ತ ಸನ್ಯಾಸಿನಿ ಅತ್ಯಾಚಾರಕ್ಕೊಳಗಾಗಿರುವುದು ತನಿಖೆಯಲ್ಲಿ ಮನವರಿಕೆಯಾಗಿದೆ ಎಂದು ರಿಮಾಂಡ್ ವರದಿಯಲ್ಲಿ ತನಿಖಾ ತಂಡ ವಿವರಿಸಿತ್ತು.

Leave a Reply