ಶಿಕ್ಷಣ ವ್ಯವಸ್ಥೆಯ ಬಗ್ಗೆ ಈ ದಿನಗಳಲ್ಲಿ ಚೀನಾದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕಾರಣ ಏನಂದ್ರೆ ಇತ್ತೀಚೆಗೆ ಶಾಲಾ ಮಕ್ಕಳಿಗೆ ಹೊಸ ಪ್ರಸ್ತಾಪವನ್ನು ನೀಡಲಾಗಿದ್ದು ಈ ಪ್ರಸ್ತಾಪದಲ್ಲಿ ಮಕ್ಕಳಿಗೆ ಬೇಗನೆ ಮಲಗಲು ಸೂಚಿಸಲಾಗಿದೆ. ಮಕ್ಕಳು ಹೋಮ್ ವರ್ಕ್ ಅಥವಾ ಮಾಡದೇ ಇದ್ದರೂ ಮಕ್ಕಳು 10 ಗಂಟೆಯ ಒಳಗಡೆ ಮಲಗುವುದು ಕಡ್ಡಾಯವಾಗಿದೆ ಎಂದು ಪ್ರಸ್ತಾಪದಲ್ಲಿ ಸೂಚಿಸಲಾಗಿದೆ.

ಹೆತ್ತವರು ಇದನ್ನು ಕರ್ಫ್ಯೂ ಎಂದು ಕರೆದಿದ್ದಾರೆ. ಈ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಕಡ್ಡಾಯಗೊಳಿಸಿರುವಂತೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು 9:00 ಗಂಟೆಗೆ ಮತ್ತು ಪ್ರೌಢ ಶಾಲೆಯಲ್ಲಿ ಕಲಿಯುವಂತಹ ಮಕ್ಕಳು 10 ಗಂಟೆಯ ಮುಂಚೆ ಮಲಗಬೇಕು ಎಂದು ಆದೇಶಿಸಲಾಗಿದೆ.

ಮಾತ್ರವಲ್ಲ ಈ ಕರಡು ಇನ್ನು ಹೆಚ್ಚಿನ ಸಲಹೆಗಳನ್ನು ಒಳಗೊಂಡಿದ್ದು ಚೀನಿ ಶಾಲಾಮಕ್ಕಳು ಮನೆಗೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಮಾತ್ರವಲ್ಲ ಮಕ್ಕಳ ಪೋಷಕರು ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಮಕ್ಕಳನ್ನು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಬೇಗ ಮಲಗಿಸಬೇಕು ಎಂದು ಕರಡಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಚೀನೀ ಪೋಷಕರು ಅಸಮಾಧಾನವನ್ನು ತೋರ್ಪಡಿಸಿದ್ದು, ಚೀನಾದಲ್ಲಿ ಇದು ಚರ್ಚೆಗೆ ನಾಂದಿ ಹಾಡಿದೆ. ಹೋಮ್ ವರ್ಕ್ ಕಡಿಮೆಯಾದ ಕಾರಣ ಅವರು ಸ್ಪರ್ಧೆಯಲ್ಲಿ ಹಿಂದೆ ಬೀಳುತ್ತಾರೆ ಎಂಬುದು ಪೋಷಕರ ಅಭಿಪ್ರಾಯವಾಗಿದೆ.

Leave a Reply