photo courtesy: time8

ಗವಾಹಟಿ: ಅಸ್ಸಾಮ್‍ನ ಉತ್ತರ ಲಖೀಪುರ ಜಿಲ್ಲೆಯ ಖಬ್ಲೂ ಎಂಬಲ್ಲಿ ಆಸ್ಪತ್ರೆಗೆ ತೆರಳಲು ಯಾವ ವಾಹನವೂ ಸಿಗದೆ ಗರ್ಭಿಣಿ ಮಹಿಳೆ ರಸ್ತೆ ಬದಿಯಲ್ಲಿ ಮಳೆ ಸುರಿಯುತ್ತಿದ್ದಂತೆ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಪ್ರಸೂತಿಗೆ ಅಲ್ಲಿ ಒಂದು ಟಿನ್ ಮತ್ತು ಎರಡು ಕೊಡೆಗಳ ಚಪ್ಪರ ಮಾಡಲಾಯಿತು. ಇತರ ನಾಲ್ವರು ಮಹಿಳೆಯರು ಮಹಿಳೆಗೆ ಹೆರಿಗೆ ಮಾಡಿಸಿದರು.

ತದನಂತರ ನೆರೆ ಗ್ರಾಮದ ಜನರು ತಾಯಿ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ನವಜಾತ ಮಗು ಮತ್ತು ತಾಯಿ ಸುಬಾನಸಿರಿ ನದಿಯ ದಡದಲ್ಲಿ ನಿನ್ನೆ ರಾತ್ರೆಯಿಡಿ ಕಳೆದಿದ್ದಾರೆ. ಇಂದು ಬೆಳಗ್ಗೆ ಮಜುಲಿಯ ಪಿತಾಂಭರ ದೇವ ಗೋಸ್ವಾಮಿ ಸಿವಿಲ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ ಉತ್ತರ ಲಖೀಪುರದ ಪಥೋರಿಸುಕ ನಿವಾಸಿ 22 ವರ್ಷದ ಮಹಿಳೆ ಎಮೊನಿ ನಾರಾ ಆಸ್ಪತ್ರೆಗೆ ನಿಯಮಿತ ಚೆಕ್‍ಅಪ್‍ಗಾಗಿ ಹೋಗಿದ್ದರು. ಆಸ್ಪತ್ರೆಯಲ್ಲಿ ಎಡ್ಮಿಟ್ ಬೆಡ್ ಖಾಲಿ ಇದ್ದುದರಿಂದ ಅಡ್ಮಿಟ್ ಮಾಡಿಕೊಳ್ಳಲು ಆಗಿರಲಿಲ್ಲ. ಸೊನೊಗ್ರಫಿ ಟೆಸ್ಟ್ ಮಾಡಿದ ವೈದ್ಯರು ಮುಂದಿನ ವಾರ ಹೆರಿಗೆಯಾಗಲಿದೆ ಎಂದು ಹೇಳಿದ್ದರು. ಪತಿಯ ಜತೆ ಮನೆಗೆ ಮರಳುವ ಹಾದಿಯಾಗಿ ಸುಬಾನ್ಸಿರ ನದಿ ದಾಟಲು ದೋಣಿಗೆ ಹತ್ತಿದ್ದರು. ಆಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆದ್ದರಿಂದ ಬೋಟ್‍ನಿಂದ ಇಳಿದುನದಿ ದಡಕ್ಕೆ ಪತಿ ಮತ್ತು ಮಹಿಳೆ ಬಂದರು.

ಈ ವೇಳೆ ಎಮೊನಿ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಆಕೆಯನ್ನು ನೋಡಿ ಅಲ್ಲಿದ್ದ ನಾಲ್ವರು ಮಹಿಳೆಯರು ಸಹಾಯ ಮಾಡಿದರು. ಅಲ್ಲಿಯೆ ಮಹಿಳೆ ಮಗುವಿಗೆ ಜನ್ಮ ನೀಡಿದರು. ಮಹಿಳೆ ಮತ್ತು ನವಜಾತ ಶಿಶು ಸ್ಥಳೀಯ ನಾಗರಿಕರು ಮತ್ತು ಪತ್ರಕರ್ತರ ನೆರವಿನಲ್ಲಿ ಗತ್ಯಂತರವಿಲ್ಲದೆ ಇಡೀ ರಾತ್ರೆ ನದಿ ದಡದಲ್ಲಿ ಬೆಳಗಾಗುವವರೆಗೆ ಉಳಿದುಕೊಂಡರು. ಬಾಣಂತಿಯನ್ನು ಕರೆದುಕೊಂಡು ಹೋಗಲು ವಾಹನ ಸಿಗದ್ದರಿಂದ ಪತ್ರಕರ್ತರೊಬ್ಬರು ತಮ್ಮ ಸೈಕಲ್‍ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆತಲುಪಿಸಿದ್ದಾರೆ. ತಾಯಿ ಮಗು ಆರೋಗ್ಯಪೂರ್ಣವಾಗಿದ್ದಾರೆ.

Leave a Reply