ಈ ಜೀವನದಲ್ಲಿ ಕೆಲವರಿಗೆ ಹೆಚ್ಚು ಸಂಪತ್ತು, ಶಿಕ್ಷಣ, ಸ್ಥಾನ ಸಿಗುತ್ತದೆ. ಇನ್ನು ಕೆಲವರಿಗೆ ತೀರಾ ಕಡಿಮೆ ಸಿಗುತ್ತದೆ.

ಇಲ್ಲೊಂದು ಅಸಾಮಾನ್ಯ ದೃಶ್ಯ ಕಾಣುತ್ತದೆ, ಜಗತ್ತಿನ ಅತಿ ಎತ್ತರದ ವ್ಯಕ್ತಿಯು, ವಿಶ್ವದ ಅತಿ ಗಿಡ್ಡ ಮಹಿಳೆಯನ್ನು ಜನವರಿ 26 ರಂದು ಎಗ್ಪಿಟ್ನಲ್ಲಿ ಭೇಟಿಯಾಗಿದ್ದಾರೆ.
ಪಿರಮಿಡ್ಗಳ ಮುಂದೆ ಈ ಜೋಡಿ ಚಿತ್ರ ಇಂಟರ್ ನೆಟ್ ನಲ್ಲಿ ಎಲ್ಲರ ಗಮನ ಸೆಳೆದಿದೆ.

ಟರ್ಕಿ ಮೂಲದ 34 ವರ್ಷದ ಸುಲ್ತಾನ ಕೊಸೇನ್ ಗಿನ್ನೀಸ್ ವಿಶ್ವ ದಾಖಲೆಗಳ ಪ್ರಕಾರ ಭೂಮಿಯಲ್ಲಿರುವ ಅತಿ ಎತ್ತರದ ವ್ಯಕ್ತಿಯಾಗಿದ್ದಾರೆ. 25 ವರ್ಷ ವಯಸ್ಸಿನ ಭಾರತದ ಜ್ಯೋತಿ ಪ್ರಪಂಚದ ಅತಿ ಕಡಿಮೆ ಜೀವಂತ ಮಹಿಳೆಯಾಗಿದ್ದಾರೆ.

ಸುಲ್ತಾನ್ 8’1 “ಅಡಿ ಎತ್ತರ ಮತ್ತು ಅತಿದೊಡ್ಡ ಕೈಗಳಿಗಾಗಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. 2009 ರಲ್ಲಿ ಅವರು 2.47 ಮೀಟರ್ ಎತ್ತರವಾಗಿದ್ದು, ನಂತರ ಇದು 2.51 ಮೀ ಎತ್ತರ ಬೆಳೆದಿದ್ದಾರೆ. ಅವರ ಮುಂದೆ ವಿಶ್ವದ ಗಿಡ್ಡದ ಮಹಿಳೆ, ಜ್ಯೋತಿ ಆಮ್ಜ್, (2’6 “ಇಂಚುಗಳಷ್ಟು) ನಿಂತಿದ್ದರು.

ಇವರಿಬ್ಬರನ್ನು ಪ್ರವಾಸಿಗರು ನೋಡಿ ಅಚ್ಚರಿ ಪಟ್ಟಿದ್ದು ಫೋಟೋಗಳನ್ನು ತೆಗೆದಿದ್ದಾರೆ.

Leave a Reply