ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಎಂಟು ತಿಂಗಳ ಗರ್ಭಿಣಿ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಲಾಗಿದ್ದು, ಮಾತ್ರವಲ್ಲದೆ ನಾಲ್ವರು ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧಿ ಮೂವರು ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಹಾರಾಷ್ಟ್ರ ರಾಜ್ಯ ಮಹಿಳಾ ಕಮಿಷನ್ ಅಧ್ಯಕ್ಷೆ ವಿಜಯ ರಹಾತ್ಕರವರು, ಈ ಪ್ರಕರಣದ ತನಿಖೆ ನಡೆಸಿ ಸಮಿತಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸಂಗ್ಲಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಿದ್ದಾರೆ.

ದಿ ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಸತಾರಾ ನಿವಾಸಿಗಳಾದ ಇವರು ತಮ್ಮ ಹೋಟೆಲ್ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತುರ್ಚಿ ಪೋಟಾ ಹೋಗಿದ್ದು ಅಲ್ಲಿ ಆರೋಪಿಗಳಲ್ಲೋರ್ವ ಇಬ್ಬರನ್ನೂ ಹೋಟೆಲ್ ಕೆಲಸಕ್ಕೆ ಪರಿಚಯಿಸುವುದಾಗಿ ಹೇಳಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಜಯ್ ಸಿಂಕರ್ ಹೇಳಿದರು

Leave a Reply