ಕೊಚ್ಚಿ: ಶಬರಿಮಲೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಮ್ ಕೋರ್ಟು ನೀಡಿದ ತೀರ್ಪನ್ನು ಪ್ರತಿಭಟಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಹಿಂದೂ ಪರಿಷತ್‍ನ ಸದಸ್ಯನೆಂದು ಸ್ವಯಂ ಪರಿಚಯಿಸಿಕೊಂಡ ಶ್ರೀರಾಜ್ ಕೈಮಲ್ ಎಂಬ ಯುವಕನನ್ನುಪೊಲೀಸರು ಬಂಧಿಸಿದರು.

ಶಬರಿಮಲೆ ತೀರ್ಪನ್ನು ಪ್ರತಿಭಟಿಸಿ ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಆತ ಹೇಳಿ ಆತ ಫೇಸ್ಬುಕ್‍ನಲ್ಲಿ ಪೋಸ್ಟ್ ಹಾಕಿದ್ದ. ನಾನು ಪ್ರಾಣತ್ಯಾಗ ಮಾಡುತ್ತೇನೆ. ನನ್ನ ಅಯ್ಯಪ್ಪಸ್ವಾಮಿಗಾಗಿ. ಹಿಂದೂ ಸಮಾಜಕ್ಕಾಗಿ ಎಂದು ಪೋಸ್ಟ್ ಹಾಕಿ ತನ್ನ ಚಿಂತನಾಗತಿಯಿರುವವರೆಲ್ಲರೂ ನನ್ನ ಜೊತೆ ಸೇರಿ ಎಂದು ಕರೆ ನೀಡಿದ್ದನು.

ಸೆಪ್ಟಂಬರ್ 29ಕ್ಕೆ ಪೋಸ್ಟ್ ಹಾಕಿದ್ದು ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಹೈಕೋರ್ಟು ಜಂಕ್ಷನ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ ಹೇಳಿದ್ದನು. ಕಳೆದ ದಿವಸ ಈತನಿಗೆ ಪೊಲೀಸರು ಕರೆಮಾಡಿದರೂ ಫೋನ್ ಸ್ವಿಚ್ ಆಫ್ ಮಾಢಿದ್ದನು.

ಆದ್ದರಿಂದ ಇಂದು ಬೆಳಗ್ಗೆ ಹೈಕೋರ್ಟು ಪರಿಸರದಲ್ಲಿ ದೊಡ್ಡ ಪೊಲೀಸರ ಕಾವಲಿತ್ತು.ಅಗ್ನಿಶಾಮಕ ದಳವೂ ಇತ್ತು. ಆದರೆ ಹೈಕೋರ್ಟು ಪರಿಸರಕ್ಕೆ ಬಂದೊಡನೆ ಶ್ರೀರಾಜ್‍ನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply